ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿವಪಂಚಾಕ್ಷರೇಶ್ವರರ ಪುಣ್ಯಾರಾಧನೆ ಇಂದು

Lingaraj Badiger
Updated On : 18 Apr 2013, 11:10 am

ಗುಲ್ಬರ್ಗ/ಶಹಾಬಾದ್: ಪೇಠಶಿರೂರ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠ ಸಂಸ್ಥಾನದಲ್ಲಿ ಲಿಂ. ಶಿವಪಂಚಾಕ್ಷರೇಶ್ವರರ 35ನೇ ಪಣ್ಯಾರಾಧನೆ ಹಾಗೂ ಸಿದ್ದಲಿಂಗ ಸ್ವಾಮಿಗಳ 4ನೇ ಪಟ್ಟಾಧಿಕಾರ ಮಹೋತ್ಸವ ಏ.18ರಿಂದ 21ರವರೆಗೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ. ಏ.18ರಂದು ರಾತ್ರಿ 8 ಗಂಟೆಗೆ ಪುರಾಣ ಉದ್ಘಾಟನೆ ಚಿತ್ತಾಪುರ ಹಿರಿಯ ನ್ಯಾಯಾಧೀಶರಾದ ಸಿ.ರಂಗೇಗೌಡ ಅವರಿಂದ, ಸಾನ್ನಿಧ್ಯ ಸಿದ್ದಲಿಂಗ ಸ್ವಾಮೀಜಿ, ಅತಿಥಿಗಳಾಗಿ ಡಾ. ಟಿ.ಎ. ಪಾಟೀಲ್, ಉಪನ್ಯಾಸ ಡಾ. ಸೋಮಶಂಕರ ವಿಶ್ವನಾಥಮಠ, ಚಂದ್ರಶೇಖರ ಅವಂಟಿ ಉಪಸ್ಥಿತರಿರುವರು. ಬಿಜಾಪುರದ ಹತ್ತರಗಾ ವಿರಕ್ತ ಮಠದ ಮುರುಘೇಂದ್ರ ಸ್ವಾಮಿಗಳಿಂದ ಪುರಾಣ ನಡೆಯುವುದು.  ಏ.20 ರಂದು ಪುರಾಣ ಮಂಗಲ, 21ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ, 10ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ, 11ಕ್ಕೆ ಮಹಾಪ್ರಸಾದ ವಿತರಣೆ, ಮ.12.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯುವುದು. ಸಂಜೆ 7ಕ್ಕೆ ಧರ್ಮಸಭೆ ನಡೆಯಲಿದೆ. ಗಣ್ಯರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಅಪಘಾತ: ಒಬ್ಬ ಸಾವು,
ಇನ್ನೊಬ್ಬನಿಗೆ ಗಾಯ
ಗುಲ್ಬರ್ಗ: ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಇನ್ನೊಬ್ಬ ಗಾಯಗೊಂಡ ಘಟನೆ ಗುಲ್ಬರ್ಗದ ಸಲಾಮಟೇಕಡಿ ಬಜಾಜ್ ಕಂಪನಿಯ ಎದುರುಗಡೆ ಸಂಭವಿಸಿದೆ. ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಶಿವನಾಗಪ್ಪ ತಂದೆ ಮುರುಗೆಪ್ಪ ಬೆಳವಡಗಿ ಚಿಕಿತ್ಸೆ ಫಲಕಾರಿಯಾಗದೆ ಸೊಲ್ಲಾಪುರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ರೇವಣಸಿದ್ದ ಬಿರಾದಾರ ಗಾಯಗೊಂಡಿದ್ದಾನೆ. ಇಬ್ಬರು ಬೈಕ್ ಮೇಲೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬದುಕಿಗೆ ಕಲೆ, ಸಾಹಿತ್ಯ ಅಳವಡಿಸಿಕೊಳ್ಳಿ
ಶಹಾಪುರ: ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಭ್ಯಾಸ ಮಾಡದೇ ಜ್ಞಾನಕ್ಕಾಗಿ ಮಾಡಬೇಕು. ಉತ್ತಮ ಬದುಕಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಅಳವಡಿಸಿಕೊಂಡು ಅಭ್ಯಾಸದ ಜತೆಗೆ ಸಾಹಿತ್ಯ ಅಳವಡಿಸಿಕೊಂಡಾಗ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಸಾಹಿತಿ ಚಂದ್ರಕಾಂತ ಕರದಳ್ಳಿ ಹೇಳಿದರು. ಪಟ್ಟಣದ ಚಿಂತಮ್ಮ ಗೌಡತಿ ಪಿಯು ಕಾಲೇಜು ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕತೆಗಾರ ಸಿದ್ಧರಾಮ ಹೊನ್ಕಲ್ ಮಾತನಾಡಿದರು.
ಅಣ್ಣಪ್ಪ ವಣದೆ ನಿಧನ
ಆಳಂದ: ಪಟ್ಟಣದ ಕುಂಬಾರ ಗಲ್ಲಿಯ ನಿವಾಸಿ,  ಹಿರಿಯ ಮತ್ತು ಅತೀ ಸಣ್ಣ ರೈತ ಅಣ್ಣಪ್ಪ ಶರಣಪ್ಪ ವಣದೆ (70) ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಮೂವರು ಪುತ್ರರು, ಇಬ್ಬರು ಪತ್ನಿಯರು ಸೇರಿ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಬುಧವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಿತು. ರಾಜಕೀಯ ಅನೇಕ ಧುರೀಣರು ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement