ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

10 ಅಭ್ಯರ್ಥಿ ನಾಮಪತ್ರ ತಿರಸ್ಕೃತ

Lingaraj Badiger
Updated On : 19 Apr 2013, 11:37 am

ಗುಲ್ಬರ್ಗ: ಜಿಲ್ಲೆಯ 9 ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನಾ ಕಾರ್ಯ ಗುರುವಾರ ಜರುಗಿತು. ನಾಮಪತ್ರಗಳ ಪರಿಶೀಲನೆ ನಂತರ ಜಿಲ್ಲೆಯಲ್ಲಿ 174 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, 10 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ. ಅಫಜಲ್ಪುರ ಮತ್ತು ಗುಲ್ಬರ್ಗ ಗ್ರಾಮೀಣ(ಎಸ್ಸಿ) ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ತಿರಸ್ಕೃತವಾಗಿಲ್ಲ. ಉಳಿದ 7 ಕ್ಷೇತ್ರಗಳಲ್ಲಿ ನಾಮಪತ್ರ ತಿರಸ್ಕೃತಗೊಂಡ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರ ಇಂತಿದೆ. ಜೇವರ್ಗಿಯಲ್ಲಿ ಮಹಾದೇವಪ್ಪ- ಜೆಡಿಯು. ಚಿತ್ತಾಪುರ(ಎಸ್‌ಸಿ) ಕ್ಷೇತ್ರದಲ್ಲಿ ವೆಂಕಟೇಶ- ಬಿಎಸ್ಸಾರ್ ಕಾಂಗ್ರೆಸ್, ಮಹಾದೇವ ತಳವಾರ- ಪಕ್ಷೇತರ, ಶರಣಪ್ಪ- ಪಕ್ಷೇತರ. ಸೇಡಂ ಕ್ಷೇತ್ರದಲ್ಲಿ ಶಿವಕುಮಾರ ವೀರಶೆಟ್ಟೆಪ್ಪ ಬಿಜೆಪಿ. ಚಿಂಚೋಳಿ(ಎಸ್ಸಿ) ಕ್ಷೇತ್ರದಲ್ಲಿ ಸಂದೀಪ ಚವ್ಹಾಣ ಪಕ್ಷೇತರ. ಗುಲ್ಬರ್ಗ(ದಕ್ಷಿಣ) ಕ್ಷೇತ್ರದಲ್ಲಿ ಮಹ್ಮದ್ ಗಾಲೀಬ್ ಪಾಶಾ- ಪಕ್ಷೇತರ, ಶೀತಲ್ ಹೀರಾಪುರ ಎಸ್ಪಿ. ಗುಲ್ಬರ್ಗ(ಉತ್ತರ) ಕ್ಷೇತ್ರದಲ್ಲಿ ನರಸಿಂಗ್ ಬಿಜೆಪಿ. ಆಳಂದ ಕ್ಷೇತ್ರದಲ್ಲಿ ಹರ್ಷಾನಂದ ಗುತ್ತೇದಾರ ಜೆಡಿಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement