ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಳಂದ: ಒಬ್ಬರ ನಾಮಪತ್ರ ತಿರಸ್ಕೃತ

Lingaraj Badiger
Updated On : 19 Apr 2013, 11:37 am

ಆಳಂದ: ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ವಿವಿಧ ಪಕ್ಷ ಹಾಗೂ ಪಕ್ಷೇತರ ಸೇರಿ 14 ಮಂದಿ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಸಲ್ಲಿಸಿದ ಒಟ್ಟು 17 ನಾಮಪತ್ರಗಳ ಪೈಕಿ ಒಂದು ತಿರಸ್ಕೃತಗೊಂಡು 13 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಡಾ. ರಾಜಣ್ಣ .ಬಿ ತಿಳಿಸಿದ್ದಾರೆ.
ಜಿಪಂ ಸದಸ್ಯ ಆಗಿರುವ ಶಾಸಕ ಸುಭಾಷ ಗುತ್ತೇದಾರ ಪುತ್ರ ಹರ್ಷಾನಂದ ಗುತ್ತೇದಾರ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದರು. 10 ಮಂದಿ ಸೂಚಕರ ಬದಲು ಒಬ್ಬರೆ ಸೂಚಕರಿದ್ದು, ಹಾಗೂ ಪಕ್ಷದ ಬಿ. ಫಾರಂ ನೀಡದಕ್ಕೆ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 1892 ಅರ್ಜಿ ತಿರಸ್ಕೃತ ಮತದಾರ ಪಟ್ಟಿಗೆ ಹೊಸದಾಗಿ ಸೇರ್ಪಡೆಗಾಗಿ ಕ್ಷೇತ್ರದಲ್ಲಿ ಸಲ್ಲಿಕೆಯಾದ 10639 ಅರ್ಜಿಗಳ ಪೈಕಿ 8747 ಮಂದಿ ಹೆಸರು ಸೇರ್ಪಡೆಗೊಂಡಿದ್ದು, 1892 ಮಂದಿ ಅರ್ಜಿಗಳನ್ನು ಸೂಕ್ತ ದಾಖಲೆಗಳಿಲ್ಲದಕ್ಕೆ ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 ಆಳಂದ ವಿಧಾನಸಭಾ ಚುನಾವಣೆ  ವೀಕ್ಷಕರಾಗಿ ನೇಮಕಗೊಂಡಿರುವ ಉತ್ತರ ಪ್ರದೇಶ  ಐಎಎಸ್ ಅಧಿಕಾರಿ ದೇವಿಶಂಕರ ಶರ್ಮಾ  ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
--
ವಿಡಿಯೋ ಅಧಿಕಾರಿ ಬದಲು
ಗುಲ್ಬರ್ಗ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನಡೆಸುವ ಸಭೆ, ಮೆರವಣಿಗೆ ಮತ್ತು ಸೂಕ್ಷ್ಮ ಘಟನಾವಳಿಗಳನ್ನು ಚಿತ್ರೀಕರಿಸಲು ವೀಡಿಯೋ ಕಣ್ಗಾವಲು ತಂಡ ರಚನೆಗೆ ಭಾರತ ಚುನಾವಣಾ ಆಯೋಗ ನಿರ್ದೇಶಿಸಿದೆ.
ಈ ನಿರ್ದೇಶನದಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ವೀಡಿಯೋ ಕಣ್ಗಾವಲು ತಂಡ ರಚಿಸಲಾಗಿದೆ. ಚಿಂಚೋಳಿ ಮತಕ್ಷೇತ್ರದ ನೋಡಲ್ ಅಧಿಕಾರಿ ಬದಲಾಗಿದ್ದು, ಉಳಿದ ನೋಡಲ್ ಅಧಿಕಾರಿಗಳ ಬದಲಾವಣೆಯಾಗಿರುವುದಿಲ್ಲ. ಚಿಂಚೋಳಿ- ಸುರೇಶ ಜಾಧವ ಸಹಾಯಕ ಎಂಜಿನಿಯರ್ ಪಿಆರ್‌ಇ ಡಿವಿಜನ್ ಚಿಂಚೋಳಿ. ಈ ಮುಂಚೆ ಈ ಕ್ಷೇತ್ರಕ್ಕೆ ಮುನಿಚಲುವಯ್ಯ ಟಿಇ- ಸಹಾಯಕ ಎಎಚ್‌ಒ ಚಿಂಚೋಳಿ ಅವರನ್ನು ನೇಮಿಸಲಾಗಿತ್ತು. ಈ ತಂಡಗಳು ತಮ್ಮ ಮತಕ್ಷೇತ್ರ ವ್ಯಾಪ್ತಿಗಳಲ್ಲಿ ನಿರಂತರವಾಗಿ ಪ್ರವಾಸ ಕೈಗೊಂಡು ಚುನಾವಣಾ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ಘಟನಾವಳಿಗಳ ವೀಡಿಯೋ ಚಿತ್ರೀಕರಣಗೊಳಿಸುವುದು. ಪ್ರತಿನಿತ್ಯವು ವೀಡಿಯೋ ಚಿತ್ರೀಕರಿಸಲಾದ ವರದಿಯನ್ನು ವೀಕ್ಷಣಾ ತಂಡಕ್ಕೆ ಸಲ್ಲಿಸುವುದು.  ಫ್ಲೈಯಿಂಗ್ ಸ್ಕ್ವಾಡ್, ಲೆಕ್ಕಪತ್ರ ವೀಕ್ಷಣಾ ತಂಡ ಹಾಗೂ ಲೆಕ್ಕಪತ್ರ ತಪಾಸಣಾ ತಂಡ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ವಯ ಕಾರ್ಯನಿರ್ವಹಿಸುತ್ತದೆ.

ಸಂಹಿತೆ ಉಲ್ಲಂಘನೆ: ಎರಡು ವಾಹನ ಜಪ್ತಿ
ಗುಲ್ಬರ್ಗ: ಸೇಡಂನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಪಡೆಯದೆ ಪಕ್ಷದ ಸ್ವೀಕರ್ ಮತ್ತು ಬಾವುಟಗಳೊಂದಿಗೆ ಪ್ರಚಾರದಲ್ಲಿ ತೊಡಗಿದ್ದ ನಾಲ್ಕು ವಾಹನಗಳ ಪೈಕಿ ಎರಡು ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಜೆಡಿಎಸ್ ಅಭ್ಯರ್ಥಿ ಮುಕ್ರಂಖಾನ್ ಪರವಾಗಿ ಸೇಡಂ ಜಿ.ಕೆ. ಕ್ರಾಸ್ ಹತ್ತಿರ ಕಾರ್ಯಕರ್ತರು ಎರಡು ಟಂಟಂ, ತಲಾ ಒಂದು ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಸ್ವಿಕರ್ ಮತ್ತು ಬಾವುಟಗಳಿಂದ ಪ್ರಚಾರ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವುಗಳನ್ನಪಎ  ಠಾಣೆಗೆ ಒಪ್ಪಿಸಲಾಗಿದ್ದು, 2ವಾಹನಗಳ ಚಾಲಕರು ತಪ್ಪಿಸಿಕೊಂಡು ಹೋಗಿದ್ದಾರೆ.
 ಮಹೆಬೂಬಪಾಶಾ  ತಮ್ಮ ತಂಡದೊಂದಿಗೆ ದಾಳಿ ನಡೆಸಿದ್ದಾರೆ.  ಸೇಡಂ  ಠಾಣೆಯಲ್ಲಿ ದೂರು ದಾಖಲಾಗಿದೆ.
--
ವೀಕ್ಷಕರ ವಿವರ
ಗುಲ್ಬರ್ಗ: ಭಾರತ ಚುನಾವಣಾ ಆಯೋಗವು ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಸಾರ್ವತ್ರಿಕ ಚುನಾವಣೆಗಾಗಿ 9 ಜನ ಸಾಮಾನ್ಯ ಚುನಾವಣಾ ವೀಕ್ಷಕರನ್ನು ನೇಮಕ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೇಮಕಗೊಂಡ ವೀಕ್ಷಕರ ಹೆಸರು ಇಂತಿದೆ.
ಅಫಜಲ್ಪುರ: ಅಶೋಕ ಶರ್ಮಾ ಐಎಫ್‌ಎಸ್, ಜೇವರ್ಗಿ- ಅಶೋಕಕುಮಾರ ಮಲ್ಲಿಕ್ ಐಎಎಸ್, ಚಿತ್ತಾಪುರ(ಎಸ್‌ಸಿ)- ಅಜಯಕುಮಾರ ಶರ್ಮಾ ಐಡಿಇಎಸ್, ಸೇಡಂ- ವೀಣಾ ಶ್ರೀವಾಸ್ತವ ಐಎಎಸ್, ಚಿಂಚೋಳಿ(ಎಸ್‌ಸಿ)- ಸಿ.ಎ.ಲತಾ ಐಎಎಸ್, ಗುಲ್ಬರ್ಗ ಗ್ರಾಮೀಣ (ಎಸ್‌ಸಿ)- ಹೃದಯಶಂಕರ ತಿವಾರಿ ಐಎಎಸ್, ಗುಲ್ಬರ್ಗ(ದಕ್ಷಿಣ)- ಎನ್.ಕೆ. ಶಶಿಧರನ್ ಐಎಫ್‌ಎಸ್, ಗುಲ್ಬರ್ಗ(ಉತ್ತರ)- ಅನಿತಾ ರಾಜೇಂದ್ರನ್ ಐಎಎಸ್ ಹಾಗೂ ಆಳಂದ ದೇವಿಶಂಕರ ಶರ್ಮಾ ಐಎಎಸ್.

ಎಡಗೈ ಬೆರಳಿಗೆ ಶಾಯಿ
ಗುಲ್ಬರ್ಗ: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸುವ ಮತದಾರರ ಎಡಗೈ ಉಂಗುರು ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುವುದು. ಮರು ಮತದಾನ ಪ್ರಕರಣಗಳಲ್ಲಿ ಮತದಾರರ ಎಡಗೈ ಕಿರು ಬೆರಳಿಗೆ  ಶಾಯಿ ಗುರುತು ಹಾಕಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement