ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿಂಚೋಳಿ; ಬಿಜೆಪಿ ತೊರೆದು ಕೆಜೆಪಿ ಸೇರ್ಪಡೆ

Lingaraj Badiger
Updated On : 19 Apr 2013, 11:30 am

ಚಿಂಚೋಳಿ: ತಾಪಂ ಬಿಜೆಪಿ ಸದಸ್ಯರು ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರಿಗೆ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಲು ಬಿಜೆಪಿ ತೊರೆದು ಕೆಜೆಪಿಗೆ ಬುಧವಾರ ಸೇರ್ಪಡೆಗೊಂಡರು.
ಪಟ್ಟಣದ ಚಂದಾಪುರ ನಗರದ ಕೆಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಲ್ಯಾಪುರೆ, ತಾಪಂ ಬಿಜೆಪಿ ಸದಸ್ಯರಾದ ಗುಂಡಪ್ಪ ಮಾಳಗಿ ಕೋಡ್ಲಿ, ರಾಮರಾವ ಪಾಟೀಲ್ ಮೋಘಾ, ಅನುಸೂಯಾ ಭವಾನಿಸಿಂಗ್ ಪಸ್ತಪುರ, ಸುನೀತಾ ಪಡಶೆಟ್ಟಿ ಐನಾಪುರ, ಉಷಾ ಮಂಜುನಾಥ ಕಾಬಾ ಚಂದನಕೇರಾ, ಕಮಲಮ್ಮ ಈರಣ್ಣ ಮಿರಿಯಾಣ ಮುಂತಾದವರು ಕೆಜೆಪಿಗೆ ಸೇರಿದ್ದಾರೆ ಎಂದರು.
ಕಳೆದ 5 ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನಿಸಿದ್ದೇನೆ. ಹೀಗಾಗಿ  ಈ ಚುನಾವಣೆಯಲ್ಲಿಯೂ ಸಹ ತಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಿಂಚೋಳಿ ಪಟ್ಟಣಕ್ಕೆ ಏ.21ರಂದು ಆಗಮಿಸಿ ಬಹಿರಂಗ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದರು. ಕೋಡ್ಲಿ, ಗೋಟೂರ, ಹಸರಗುಂಡಗಿ ಗ್ರಾಮಗಳ ಕಾಂಗ್ರೆಸ್, ಬಿಜೆಪಿ,  ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷ ತೊರೆದು ಕೆಜೆಪಿಗೆ ಸೇರ್ಪಡೆಗೊಂಡರು. ಶಶಿಧರ ಸೂಗರ, ಭೀಮಶೆಟ್ಟಿ ಮುರುಡಾ, ಸಂಜೀವ ಪುಣ್ಯಶೆಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement