ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿಂಚೋಳಿ ಮೀಸಲು; ಒಂದು ನಾಮಪತ್ರ ತಿರಸ್ಕೃತ

Lingaraj Badiger
Updated On : 19 Apr 2013, 11:37 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ. 18
ಚಿಂಚೋಳಿ (ಪ.ಜಾ) ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಏ. 17ರಂದು ಸಲ್ಲಿಸಿದ ಎಲ್ಲ 23 ನಾಮಪತ್ರಗಳನ್ನು ಗುರುವಾರ ಪರಿಶೀಲನೆ ಕೈಕೊಳ್ಳಲಾಗಿದ್ದು, ಕೇವಲ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. 22 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚಿಂಚೋಳಿ ಮೀಸಲು ವಿಧಾನಸಭಾ ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದರು.
ಅವರು ಮಿನಿ ವಿಧಾನಸೌಧ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷೇತರ ಅಭ್ಯರ್ಥಿಯಾಗಿರುವ ಸಂದೀಪ ಬಾಬು ಚವ್ಹಾಣ ಅವರು 2 ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಒಂದು ನಾಮಪತ್ರದಲ್ಲಿ ವಯಸ್ಸು ತಪ್ಪಾಗಿ ನಮೂದಿಸಿರುವುದರಿಂದ ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದರು.
ಒಟ್ಟು 16 ಅಭ್ಯರ್ಥಿಗಳು ಸಲ್ಲಿಸಿದ 22 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಎಲ್ಲ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.
 ಮಾನ್ಯತೆ ಪಡೆದ ನೋಂದಾಯಿತ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಿಂದ 4 ಅಭ್ಯರ್ಥಿಗಳು, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಂದ 5 ನಾಮಪತ್ರಗಳು ಅಂಗೀಕರಿಸಲಾಗಿದೆ ಮತ್ತು ಪಕ್ಷೇತರ 7 ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು  ತಿಳಿಸಿದರು.
ಏ. 19ರಿಂದ 20ರವರೆಗೆ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.
 ಏ. 20ರಂದು ಸಂಜೆ 4 ಗಂಟೆಗೆ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಗುರುತು ನೀಡಲಾಗುವುದು.ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಭೆಯನ್ನು ಏ. 20ರಂದು ಸಂಜೆ 4 ಗಂಟೆಗೆ ನಡೆಸಲಾಗುವುದು ಎಂದರು.  ಸಹಾಯಕ ಚುನಾವಣಾಧಿಕಾರಿ ಮೋಹನ ಜೆ. ಜೋಶಿ ಅವರು ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement