ವಿವಿಧ ಗ್ರಾಮಗಳಲ್ಲಿ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ಸುರಪುರ: ಸಮೀಪದ ಸತ್ಯಂಪೇಟೆಯ ಕಾಂಗ್ರೆಸ್ ಮುಖಂಡ ಹಾಗೂ ಕಾಂಗ್ರೆಸ್ ಎಸ್ಟಿ ವಿಭಾಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಾ ಅಪ್ಪಾರಾವನಾಯಕ ಕಾಂಗ್ರೆಸ್ ತೊರೆದು ರಾಜುಗೌಡ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬೈರಿಮಡ್ಡಿ, ಬಾದ್ಯಾಪುರ, ದೇವಪುರ, ಮಾಚಗುಂಡಾಳ, ತಳವಾರಗೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ಜನ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.
ಪಕ್ಷದ ತಾಲೂಕು ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ತಾಪಂ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಜಡಿಮರಳ್, ಪುರಸಭೆ ಸದಸ್ಯರಾದ ವೇಣುಮಾಧವನಾಯಕ, ಭೀಮಾಶಂಕರ ಬಿಲ್ಲವ್, ಕಲೀಂ ಜಹಗೀರದಾರ್, ಭೀಮಣ್ಣ ಚಿಕ್ಕನಳ್ಳಿ, ಬಲಭೀಮನಾಯಕ, ವೆಂಕಟೇಶನಾಯಕ ಹಲವರಿದ್ದರು.