ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರ: 20 ನಾಮಪತ್ರ ಕ್ರಮಬದ್ಧ, 3 ತಿರಸ್ಕೃತ

Lingaraj Badiger
Updated On : 19 Apr 2013, 11:43 am

ಕನ್ನಡಪ್ರಭ ವಾರ್ತೆ, ಸುರಪುರ, ಏ.18
ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಗುರುವಾರ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲಾ ಪ್ರಕ್ರಿಯೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ಭಾಗವಹಿಸಿದ್ದರು.  
  ಒಟ್ಟು 10 ಅಭ್ಯರ್ಥಿಗಳಿಂದ 23 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 3 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 10 ಅಭ್ಯರ್ಥಿಗಳ 20 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಬಸವರಾಜ ಸುಣ್ಣದ ಸಭೆಯಲ್ಲಿ ಹೇಳಿದರು.
ತಿರಸ್ಕೃತಗೊಂಡ ನಾಮಪತ್ರಗಳು: ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತಿಮ್ಮಮ್ಮ ಶಂಭನಗೌಡ ಕೊಡೇಕಲ್ ಅವರ 2 ನಾಮಪತ್ರಗಳು ಮತ್ತು ಬಸವರಾಜ ಎಂಬವರ ಒಂದು ನಾಮಪತ್ರ ತಿರಸ್ಕೃತಗೊಂಡಿವೆ. ಏ. 20ರಂದು ನಾಮಪತ್ರ ವಾಪಸಾತಿಗೆ ಕಡೆ ದಿನವಾಗಿದೆ. ಅಂದು 4 ಗಂಟೆಗೆ ಚುನಾವಣಾ ವೀಕ್ಷಕರ ಸಭೆ ಕರೆಯಲಾಗಿದ್ದು, ಎಲ್ಲ ಪಕ್ಷಗಳ ಮುಖಂಡರು ಭಾಗವಹಿಸಬೇಕೆಂದು ಸುಣ್ಣದ ಹೇಳಿದರು. ಆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಗಳ ಚಿಹ್ನೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಚುನಾವಣಾ ವೀಕ್ಷಕ ಯು.ಜಿ. ಅವಸಾಕ್, ಎಆರ್‌ಒ ಮತ್ತು ತಹಸೀಲ್ದಾರ್ ಮೊಹ್ಮದ್ ಗೌಸುದ್ದೀನ್, ನೋಡಲ್ ಅಧಿಕಾರಿ ಎಚ್.ಎಂ. ಬಂತನಾಳ್, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ರಾಜುಗೌಡ, ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ರಾಜಾ ಮದನಗೋಪಾಲನಾಯಕ, ಕೆಜೆಪಿ ಅಭ್ಯರ್ಥಿ ಶಿವರಾಜ ಮಲ್ಲೇಶಿ, ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ನಂದಕುಮಾರ ಮಾಲಿ ಪಾಟೀಲ್, ಜೆಡಿಯುನ ರಾಮಲಿಂಗಪ್ಪ ನಾಯಕ, ನಾನಾ ಪಕ್ಷಗಳ ಮುಖಂಡರು ಮತ್ತು ಸೂಚಕರಾದ ರಾಜಾ ಹನಮಪ್ಪನಾಯಕ, ನಿಂಗಣ್ಣ ಬಾದ್ಯಾಪುರ, ಭೀಮಾಶಂಕರ ಬಿಲ್ಲವ್, ವಿಶ್ವಕರ್ಮರಾಜ್, ಹರ್ಷವರ್ಧನಾಯಕ, ಬಲಭೀಮನಾಯಕ ಬೈರಿಮಡ್ಡಿ, ಅಬ್ದುಲ್ ಗನಿ, ರಾಮನಗೌಡ ಬೊಮ್ಮನಳ್ಳಿ, ಹಣಮಂತ, ವಕೀಲರಾದ ಅರವಿಂದಕುಮಾರ ಕಲ್ಬುರ್ಗಿಕರ್, ಅಪ್ಪಾಸಾಹೇಬ ಪಾಟೀಲ್, ವಕೀಲ ಬಿ.ಕೆ. ದೇಸಾಯಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement