3 ನಾಮಪತ್ರ ತಿರಸ್ಕೃತ, 19 ಕ್ರಮಬದ್ಧ
ಚಿತ್ತಾಪುರ: ಚಿತ್ತಾಪುರ ಮೀಸಲು ವಿಧಾನಸಭೆ ಚುನಾವಣೆ ಕ್ಷೇತ್ರಕ್ಕೆ ಸಲ್ಲಿಸಲಾಗಿರುವ ನಾಮಪತ್ರಗಳ ಪರಿಶೀಲನೆ ಚುನಾವಣಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಗುರುವಾರ ನಡೆದಿದ್ದು, ಒಟ್ಟು 15 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾಗಿದ್ದು 3 ನಾಮಪತ್ರ ತಿರಸ್ಕೃತಗೊಂಡಿವೆ. 19 ನಾಮಪತ್ರ ಕ್ರಮಬದ್ದವಾಗಿವೆ ಎಂದು ಚುನಾವಣಾಧಿಕಾರಿ ಚಂದ್ರಶೇಖರ ದೊಡ್ಮನಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಎಸ್.ಎಫ್. ಸಂಜಿವಣ್ಣನವರ್ ತಿಳಿಸಿದ್ದಾರೆ.
ಬಿಎಸ್ಆರ್ ಪಕ್ಷದ ಅಭ್ಯರ್ಥಿ ವೆಂಕಟೇಶ ತಾಯಪ್ಪ ಅವರು 10 ಜನ ಸೂಚಕರ ಬದಲಿಗೆ 5 ಜನ ಸೂಚಕರ ಸಹಿ ಮಾಡಿಸಿರುವುದರಿಂದ ನಾಮಪತ್ರ ತಿರಸ್ಕರಿಸಲಾಗಿದೆ. ಪಕ್ಷೇತರ ಅಭ್ಯರ್ಥಿಯಾದ ಶರಣಪ್ಪ ನಾಗಪ್ಪ ಅವರು ಆಸ್ತಿ ಮಾಹಿತಿ ಪ್ರಮಾಣಪತ್ರ ಸಲ್ಲಿಸದೆ ಇರುವುದರಿಂದ, ಮಹಾದೇವ ಶಿವಪ್ಪ ಅವರು ಜಾತಿ ಪ್ರಮಾಣ ಪತ್ರ ಸಲ್ಲಿಸದೆ ಇರುವುದರಿಂದ ಹಾಗೂ ನಾಮಪತ್ರ ಜಾತಿ ಕಾಲಂನಲ್ಲಿ ಜಾತಿ ನಮೂದಿಸಿಲ್ಲದ ಕಾರಣ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.