ಕಾಂಗ್ರೆಸ್ ಸೇರ್ಪಡೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರ ಜೆಡಿಎಸ್ ಉಪಾಧ್ಯಕ್ಷ ಶಿವರಾಜ ಕೋರೆ, ಮಾದಿಗ ಮೀಸಲು ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ನಾಮದೇವ ಸಿಪ್ಪಿ, ಸಾಹಿತಿ ನಾಗಪ್ಪ ಬೆಳಮಗಿ ಬಿಜೆಪಿ ಅಕ್ಬರ್ ಹುಸೇನಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ರಾಮಕೃಷ್ಣ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಬುಧವಾರ ನಗರದ ಮಜೀದ್ ಚೌಕದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಮಹಿಬೂಬ್ ಪುಟಾನಗರ, ಮುನಾಫ, ಅನ್ವರ ಚಪಾಟ್ಲೆ, ಅಲಿ ಪಟೇಲ್, ಶಫಿಯುಲ್ಲಾ ಹುಸೇನಿ, ಖಾಜಾ ಪಟೇಲ್, ಸೈಯದ್ ಯೂನಸ್ ಹುಸೇನಿ, ಜಾಫರ್ ಹುಸೇನಿ, ಅಬ್ದುಲ್ ಸತ್ತಾರ, ಜಾವೇದ್, ಎಂ.ಡಿ. ಶೋರಬ್, ಶೇಖ ಇಮಾಮ್, ಜಾವೇದ್ ಖಾನ್, ಅಜರ ಹುಸೇನಿ, ಶಾನವಾಜ್ ಮತ್ತಿತರರು ಕಾಂಗ್ರೆಸ್ಗೆ ಸೇರಿದರು. ಜಿ. ರಾಮಕೃಷ್ಣ ನೂತನ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ಬ್ಲಾಕ್ ಅಧ್ಯಕ್ಷ ಡಾ.ಎಂ.ಎ. ರಶೀದ್, ಕಾರ್ಯದರ್ಶಿ ಸಂತೋಷಕುಮಾರ, ಮೃತ್ಯುಂಜಯ ಸ್ವಾಮಿ, ನಿಂಗಣ್ಣ ದೇವಕರ್, ವಿಜಯಕುಮಾರ, ರಹೀಮ, ಲಕ್ಷ್ಮಣ, ನಗರಸಭೆ ಸದಸ್ಯರಾದ ಡಾ. ಅಹ್ಮದ್ ಪಟೇಲ್, ಸೂರ್ಯಕಾಂತ ಕೋಬಾಳ, ಕುಮಾರ, ಪುಲಾಬಾಯಿ, ಲಕ್ಷ್ಮೀಬಾಯಿ, ಮಹಿಬೂಬ ಇದ್ದರು.
ಬಿಜೆಪಿ ಸೇರ್ಪಡೆ
ಗುಲ್ಬರ್ಗ: ತಾವರಗೇರಾ ಗ್ರಾಪಂ ಸದಸ್ಯ ರಶೀದ್ ಪಟೇಲ್, ಗುಣಶೇಖರ ಪಂಚಾಳ, ಗೋದಾವರಿ ಜಿ. ಜಮಾದಾರ, ಲಕ್ಷ್ಮೀ ಎಂ. ಅಂಕಲಗಿ, ಶರಣಯ್ಯ ಸ್ವಾಮಿ, ಗುಡುಪಟೇಲ್, ಖಾಸಿಂ ಪಟೇಲ್, ಶಮಶೋದ್ದೀನ್ ಮೊಮಿನ್, ಅಜೀಜ್ ಪಟೇಲ್, ಸೂರ್ಯಕಾಂತ ಬಿರಗೊಂಡ, ಬೀರಣ್ಣ ಸಿಂದಗಿ ಮತ್ತು ಗಣೇಶ ಯುವಕ ಮಂಡಳಿಯ ಸದಸ್ಯರು ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು ಎಂದು ಅಣವೀರಪ್ಪ ಅ. ಪಂಚಾಳ ತಿಳಿಸಿದ್ದಾರೆ.
ಸ್ವೀಕರ್ಗಳು ಜಪ್ತಿ
ಗುಲ್ಬರ್ಗ: ಅಫಜಲ್ಪುರ ಕ್ರಾಸ್ ಹತ್ತಿರ ಇನೋವಾ ಕಾರಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸಾಗಿಸುತ್ತಿದ್ದ ಸಮಾಜವಾದಿ ಪಕ್ಷದ ಸ್ವೀಕರ್ ಮತ್ತು ಕರಪತ್ರಗಳನ್ನು ಜಪ್ತಿ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕುರಿತು ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗುರುವಾರ ಬೆಳಗ್ಗೆ 11ರ ಸುಮಾರಿಗೆ ಲಕ್ಷ್ಮಣ ತಂದೆ ಮಲ್ಲಪ್ಪ ಟಕ್ಕಳಕಿ ಎಂಬಾತ ಚುನಾವಣಾ ಅಧಿಕಾರಿಗಳ ಪರವಾನಗಿ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯುಳ್ಳ ಸ್ವೀಕರ್ಗಳನ್ನು, ಕರಪತ್ರಗಳನ್ನು ಮುದ್ರಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದಾಗ ಪ್ಲಾಯಿಂಗ್ ಸ್ಕ್ವಾಡ್ನ ಅಧಿಕಾರಿ ಡಾ. ಡಿ.ಎಂ. ಮಣ್ಣೂರು ಹಾಗೂ ಸಿಬ್ಬಂದಿ ತಪಾಸಣೆ ನಡೆಸಿ ಸ್ವೀಕರ್ ಮತ್ತು ಕರಪತ್ರ ಜಪ್ತಿ ಮಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.
'ಕೆಜೆಪಿ ಸೇರಿಲ್ಲ'
ಜೇವರ್ಗಿ: ತಾಲೂಕಿನ ನಾಗರಳ್ಳಿ ಗ್ರಾಮದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹಳ್ಳೆಪ್ಪ ಸಕ್ಪಾಲ್ ಅವರು ಕೆಜೆಪಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡ ಕೆಜೆಪಿ ಮುಖಂಡರು ವಿನಾಃ ಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.