ಬಿಎಸ್ಸಾರ್ ಮುಖಂಡ ಕಾಂಗ್ರೆಸ್ ಸೇರ್ಪಡೆ
ಸುರಪುರ: ಇಲ್ಲಿಯ ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆ ಮಾಜಿ ಸದಸ್ಯ ಸುರೇಶ ಶೆಟ್ಟಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ವಿಠ್ಠಲ ಯಾದವ, ಪುರಸಭೆ ಸದಸ್ಯ ದೇವಿಂದ್ರಪ್ಪ ಕಳ್ಳಿಮನಿ, ಮುಖಂಡರಾದ ಶಿವಣ್ಣ ಮಂಗೀಹಾಳ, ಬಸನಗೌಡ ಯಡಿಯಾಪುರ, ವೆಂಕೋಬ ಮಂಗಳೂರು, ಸೂಲಪ್ಪ ಕಮತಗಿ, ದತ್ತಾತ್ರೇಯ ಗುತ್ತೇದಾರ್, ಪ್ರಭುಗೌಡ ಪಾಟೀಲ್ ರಾಜನಕೋಳೂರು, ಗೋಪಾಲದಾಸ್ ಲಡ್ಡಾ, ವೆಂಕಟೇಶ ಪೋತಲಕರ್, ಹಣಮಂತ ದರಬಾರಿ, ಸೋಮನಾಥ ಡೊಣ್ಣಿಗೇರೆ ಇನ್ನಿತರರಿದ್ದರು. ವಸಂತ ಮಹಲ್ನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹೆಮ್ಮಡಗಿ, ರಾಯನಗೋಳ, ತೀರ್ಥ, ದೇವಪುರ ಗ್ರಾಮದ ರಾಜುಗೌಡ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡರು. ಮಾಜಿ ಸಂಸದ ರಾಜಾ ರಂಗಪ್ಪನಾಯಕ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ರಾಜಾ ಮೌನೇಶ್ವರನಾಯಕ, ತಿಪ್ಪರಾಜಗೌಡ ಬಾಚಿಮಟ್ಟಿ, ರಾಜಾ ಶ್ರೀರಾಮನಾಯಕ ಇತರರು ಇದ್ದರು.