44 ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳಿಗೆ ಮೇ 5 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ನಾಮಪತ್ರಗಳನ್ನು ಸ್ವೀಕೃತವಾದ 177 ಅಭ್ಯರ್ಥಿಗಳ ಪೈಕಿ, ಒಟ್ಟು 44 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆದ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರ..
ಅಫಜಲ್ಪುರ: ಅರುಣಕುಮಾರ್ ಪಾಟೀಲ್- ಪಕ್ಷೇತರ, ಬಸವರಾಜ ಬಿ. ಮೈಲಾಸಿ- ಪಕ್ಷೇತರ, ಮಕ್ಬೂಲ್ ಪಟೇಲ್- ಪಕ್ಷೇತರ, ಒಟ್ಟು-3
ಜೇವರ್ಗಿ: ಎಂ. ಗುಲಾಮ ರಸೂಲ್- ಐಯುಎಂಎಲ್, ಎಂ.ನಯೀಮೋದ್ದೀನ್- ನ್ಯಾಷನಲ್ ಡೆವಲಪಮೆಂಟ್ ಪಾರ್ಟಿ, ಸೈಯ್ಯದ್ ಪಟೇಲ್- ಪಕ್ಷೇತರ, ವಕೀಲ್ ಪಟೇಲ್- ಪಕ್ಷೇತರ, ಹರಿಶ್ಚಂದ್ರ- ಪಕ್ಷೇತರ, ಶಂಕರ- ಪಕ್ಷೇತರ, ಎಂ.ಯೂನುಸ್ ವಂಟಿ- ಪಕ್ಷೇತರ, ರಾಮು- ಪಕ್ಷೇತರ, ರೇವಣಸಿದ್ದಪ್ಪ- ಪಕ್ಷೇತರ, ಬಸಮ್ಮ-ಪಕ್ಷೇತರ, ಅಲೀಂ- ಪಕ್ಷೇತರ, ಹಣಮಂತ- ಪಕ್ಷೇತರ, ಬಸವರಾಜ- ಪಕ್ಷೇತರ, ಇಸ್ಮಾಯಿಲ್ ಖಾನ್-ಪಕ್ಷೇತರ, ಸುಭಾಷ- ಪಕ್ಷೇತರ, ಒಟ್ಟು-15.
ಚಿತ್ತಾಪುರ(ಎಸ್ಸಿ): ರವಿ ಕಾಂಬಳೆ- ಜೆಡಿ(ಯು), ಜೇಮಸಿಂಗ್ ಪಾಂಡುರಂಗ- ಪಕ್ಷೇತರ, ಸೀತಾರಾಮ ರಾಠೋಡ- ಪಕ್ಷೇತರ, ಒಟ್ಟು-3
ಸೇಡಂ: ಮೋನಪ್ಪ ಪೋದ್ದಾರ್- ಪಕ್ಷೇತರ
ಚಿಂಚೋಳಿ (ಎಸ್ಸಿ): ಶಾಮರಾವ- ಹಿಂದುಸ್ತಾನ ಜನತಾ ಪಾರ್ಟಿ, ಬಸವರಾಜ ಅನ್ವರಕರ್- ಪಕ್ಷೇತರ, ಗೋಪಾಲರಾವ-ಪಕ್ಷೇತರ, ಸುರೇಶ-ಪಕ್ಷೇತರ, ಒಟ್ಟು-4
ಗುಲ್ಬರ್ಗ ಗ್ರಾಮೀಣ (ಎಸ್ಸಿ): ರಾಜೇಂದ್ರ ಮೋನು ನಾಯಕ ಚವ್ಹಾಣ- ಜೆಡಿ(ಯು), ಬಿ.ಬಿ. ನಾಯಕ- ಪಕ್ಷೇತರ, ರೇವಣಸಿದ್ದಪ್ಪ ಬಸಣ್ಣ ದೊಡ್ಡಮನಿ- ಪಕ್ಷೇತರ, ಡಾ. ಲಕ್ಷ್ಮಣ ರಾಠೋಡ ಕೇರೂರ- ಪಕ್ಷೇತರ, ವಿಠ್ಠಲ್ ಜಾಧವ ನಂದೂರ- ಪಕ್ಷೇತರ, ಒಟ್ಟು-5.
ಗುಲ್ಬರ್ಗ (ದಕ್ಷಿಣ): ಇನಾಮದಾರ ಸೈಯ್ಯದ್ ಸಜ್ಜಾದ್ ಅಲಿ- ಬಿಎಸ್ಆರ್(ಕಾಂಗ್ರೆಸ್), ನಾಗೇಂದ್ರ ಹರಸೂರ-ಜೆಡಿ(ಯು), ಅಶೋಕಕುಮಾರ್ ಕುಲಕರ್ಣಿ- ಪಕ್ಷೇತರ, ಗೀತಾ ಅಮರೇಂದ್ರ- ಪಕ್ಷೇತರ, ಗುಂಡಪ್ಪ ಪಿ. ಲಂಡನಕರ್-ಪಕ್ಷೇತರ, ಪ್ರಹ್ಲಾದರಾವ- ಪಕ್ಷೇತರ, ಮಹ್ಮದ್ ಅಲಿ- ಪಕ್ಷೇತರ, ಮಹ್ಮದ್ ಸಬೀರ್ ಘೌರಿ-ಪಕ್ಷೇತರ, ಒಟ್ಟು-8.
ಗುಲ್ಬರ್ಗ (ಉತ್ತರ): ನರೇಶ ಉಖಂಡೆ- ಪಕ್ಷೇತರ, ನಾಗೇಂದ್ರಪ್ಪ ಎ.ಪೂಜಾರಿ ಅಡ್ವೋಕೇಟ್- ಪಕ್ಷೇತರ, ಮಿರ್ಜಾ ಕಜೀಮ್ ಬೇಗ್- ಪಕ್ಷೇತರ, ಮೌಲಾಸಾಬ್- ಪಕ್ಷೇತರ, ಸೈಯ್ಯದ್ ದಸ್ತಗೀರ್- ಪಕ್ಷೇತರ, ಒಟ್ಟು-5.
ಆಳಂದ: ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದಿಲ್ಲ.