ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲು

Rashmi Kasaragodu
Updated On : 21 Apr 2013, 1:51 am

ಗುಲ್ಬರ್ಗ: ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್‌ನ  ಗುಲ್ಬರ್ಗ ಗ್ರಾಮೀಣ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಗೋಡೆಗಳ ಮೇಲೆ ಭಿತ್ತಿ ಪತ್ರ ಮತ್ತು ಭಾವಚಿತ್ರ ಅಂಟಿಸಿರುವ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಕಮಲಾಪುರದಲ್ಲಿ ಕೆಜೆಪಿ ಪಕ್ಷದ ತೆಂಗಿನಕಾಯಿ ಚಿಹ್ನೆ ಮತ್ತು ಆ ಪಕ್ಷದ ಮುಖಂಡರ ಭಾವಚಿತ್ರ ಇರುವ ಭಿತ್ತಿ ಪತ್ರಗಳು ಬಸವೇಶ್ವರ ಕಟ್ಟೆಯ ಸಮೀಪದ ಲೈಟ್ ಕಂಬದ ಮೇಲೆ ಯಾವುದೇ ಪರವಾನಗಿ ಪಡೆಯದೆ ಅಂಟಿಸಿರುವ ಕುರಿತು ಚುನಾವಣಾ ಜಾಗೃತ ಅಧಿಕಾರಿ ನಾಗೇಂದ್ರ ಕಮಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಮಲಾಪುರ ಗ್ರಾಮದ ಸೇತುವೆ ಹತ್ತಿರ ಇರುವ ಗುಂಡಪ್ಪ ಮೂಲಿಮನಿ ಅವರ ಅಂಗಡಿ ಮೇಲೆ ಬಿಎಸ್ಸಾರ್ ಕಾಂಗ್ರೆಸ್ ಚಿಹ್ನೆ ಪತ್ರ, ಅಭ್ಯರ್ಥಿಯ ಭಾವಚಿತ್ರ ಅಂಟಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕುರಿತು ಚುನಾವಣಾ ಜಾಗೃತ ಅಧಿಕಾರಿ ನಾಗೇಂದ್ರ ಅವರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement