ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತಕ್ಷೇತ್ರದಲ್ಲಿ ಬಿಜೆಪಿ ಅಲೆ

Rashmi Kasaragodu
Updated On : 21 Apr 2013, 1:55 am

ಯಾದಗಿರಿ: ಬಿಜೆಪಿ ಸರ್ಕಾರ ಕೈಗೊಂಡ ಹಲವಾರು ಪ್ರಗತಿಪರ ಯೋಜನೆಗಳು ಗ್ರಾಮೀಣ ಜನತೆಯಲ್ಲಿ ಅಚ್ಚಾಗಿ ಉಳಿದಿದ್ದು, ಕ್ಷೇತ್ರಾದ್ಯಂತ ಬಿಜೆಪಿ ಪರ ಅಲೆ ಇದೆ. ಹೀಗಾಗಿ ಯಾದಗಿರಿ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುವುದರಿಂದ ಗೆಲವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಾಗನೂರು ಹೇಳಿದರು.
ಶನಿವಾರ ಮತಕ್ಷೇತ್ರದ ಚಟ್ನಳ್ಳಿ ಗ್ರಾಮದಲ್ಲಿ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಐದು ವರ್ಷದಲ್ಲಿ ಬಿಜೆಪಿ ಜಾರಿಗೆ ತಂದ ಹಲವಾರು ಜನಪರ ಕಾರ್ಯಕ್ರಮಗಳು ಪಕ್ಷದ ಗೆಲವಿಗೆ ಶ್ರೀರಕ್ಷೆಯಾಗಲಿವೆ. ನಾನು ಹೊರಗಿನ ಅಭ್ಯರ್ಥಿ ಎಂದು ಕೆಲವರು ಕ್ಷೇತ್ರದ ಮತದಾರರಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ನಾನು ಹೊರಗಿನವನಲ್ಲ. ಇದೇ ಜಿಲ್ಲೆಯವನಾಗಿದ್ದು, ಸುರಪುರ ತಾಲೂಕು ಘಟಕದ ಅಧ್ಯಕ್ಷನಾಗಿದ್ದರಿಂದ ಯಾದಗಿರಿ ಕ್ಷೇತ್ರ ನನಗೆ ಚಿರಪರಿಚಿತ. ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಆಡಳಿತ ಜನತೆ ನೋಡಿದ್ದಾರೆ. ಇವತ್ತು ಹೊಸ ಮುಖವನ್ನು ಕ್ಷೇತ್ರದ ಜನತೆ ಆಪೇಕ್ಷಿಸುತ್ತಿದ್ದಾರೆ. ಹಲಾವರು ಗ್ರಾಮಗಳಲ್ಲಿ ಮತದಾರರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದರು.
ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿ ಮತ್ತು ಸಾರಿಗೆ ವ್ಯವಸ್ಥೆ ಆಗಬೇಕಿದೆ. ಅಲ್ಲದೆ ಕೃಷ್ಣಾ ಕಾಲುವೆಯ ನೀರು ಕೊನೆಯ ಭಾಗದ ರೈತರಿಗೆ ತಲುಪಿಸಬೇಕಿದೆ. ಇಂತಹ ಹತ್ತು ಹಲವು ಸಮಸ್ಯೆಗಳ ಪರಿಹಾರದ ಬಗ್ಗೆ ಪ್ರಥಮ ಆದ್ಯತೆ ನೀಡುವ ಗುರಿ ನನ್ನದಾಗಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಜನತೆ ವಿಶ್ವಾವಾಸವಿಟ್ಟು ನನಗೆ ಮತ ಹಾಕುತ್ತಾರೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವೆಂಕಟರಡ್ಡಿ ಅಬ್ಬೆತುಮಕೂರ, ಪ್ರಶಾಂತ ಯಲ್ಹೇರಿ, ಮಹೇಂದ್ರ ಕಲಾಲ ಇತತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement