ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೊಸ ಮುಖಗಳಿಗೆ ಅವಕಾಶ: ತೇಲ್ಕೂರ

Rashmi Kasaragodu
Updated On : 21 Apr 2013, 1:53 am

ಚಿಂಚೋಳಿ: ಜಿಲ್ಲೆಯ ಎಲ್ಲ 9 ವಿಧಾನಸಭಾ ಮತಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಲ್ಲ ಜಾತಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡಿದೆ. ಚಿಂಚೋಳಿ, ಆಳಂದ, ಅಫಜಲ್ಪುರ, ಗುಲ್ಬರ್ಗ ಉತ್ತರ ಮತ್ತು ಗುಲ್ಬರ್ಗ ದಕ್ಷಿಣ ಮತಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಅವಕಾಶ ನೀಡಿ ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ಬಿಜೆಪಿ ಹೈಕಮಾಂಡ್ ಉತ್ತಮ ನಿರ್ಣಯ ಕೈಕೊಂಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಸೇಡಂ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು. ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಗುರುವಾರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೇ ಮುಂದಿನ ಮುಖ್ಯಮಂತ್ರಿಗಳೆಂದು ಬಿಜೆಪಿ ಘೋಷಣೆ ಮಾಡಿದೆ ಆದರೆ ಬೇರೆ ಪಕ್ಷಗಳು ಇನ್ನು ಮುಖ್ಯಮಂತ್ರಿಗಳ ಘೋಷಣೆ ಮಾಡಿಲ್ಲ, ಬಿಜೆಪಿ ಪಕ್ಷ ಯಾರಿಗೂ ಬೆನ್ನಿಗೂ, ಎದೆಗೂ ಚೂರಿ ಹಾಕುವ ಕೆಲಸ ಮಾಡಿಲ್ಲ ಎಂದರು. ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಅತೀಶ ಪವಾರ, ಮಹೇಶ ಬೆಳಮಗಿ, ವಿಷ್ಣುರಾವ ಬಸೂದೆ, ಶರಣು ಕುಂಬಾರ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement