ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಕ್ರಮ ಮದ್ಯ ಸಾಗಾಟ ತಡೆಯಲು 3 ಚೆಕ್‌ಪೋಸ್ಟ್

Lingaraj Badiger
Updated On : 22 Apr 2013, 11:35 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.21
ಚಿಂಚೋಳಿ ಮೀಸಲು ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮದ್ಯ ಸಾಗಾಟ ತಡೆಗಟ್ಟಲು ತಾಲೂಕಿನಲ್ಲಿ 3 ಚೆಕ್ ಪೋಸ್ಟ್ ತೆರೆದು ಅಲ್ಲಿ ಸಿಸಿ ಟಿವಿ ಅಳವಡಿಸಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಚಿತ್ತಾಪುರ ಉಪ-ವಿಭಾಗದ ಅಬಕಾರಿ ಅಧೀಕ್ಷಕ ಮೋಯಿನುದ್ದೀನ್ ತಿಳಿಸಿದರು.
ಚಿಂಚೋಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಿರಿಯಾಣ, ಕುಂಚಾವರಂ ಕ್ರಾಸ್, ಕುಸರಂಪಳ್ಳಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಸಾಗಾಟ ತಡೆಗಟ್ಟಲು ಚೆಕ್‌ಪೋಸ್ಟ್ ಪ್ರಾರಂಭಿಸಿ ಅಲ್ಲಿ ಅಬಕಾರಿ ರಕ್ಷಕರು-2 ಮತ್ತು ಗೃಹ ರಕ್ಷಕ ದಳ 2 ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದರು.
ಕುಂಚಾವರಂ ಕ್ರಾಸ್‌ನಲ್ಲಿ ಶುಕ್ರವಾರ ರಾತ್ರಿ 219.200 ಮಿಲಿಲೀಟರ್ ಕಲಬೆರೆಕೆ ಸೇಂದಿ, ಭಾರತೀಯ ಮದ್ಯ 174.600 ಮಿಲಿಲೀಟರ್, ಒಂದು ದ್ವಿಚಕ್ರ ವಾಹನ, ಒಂದು ಟಂಟಂ ಟ್ರ್ಯಾಲಿ ಸೇರಿದಂತೆ ಒಟ್ಟು 2.81 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸುಲೇಪೇಟ್ ನಿಡಗುಂದಾ ರಸ್ತೆ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ 5 ಮಿಲಿಲೀಟರ್ ಕಲಬೆರೆಕೆ ಸೇಂದಿ ಟಂಟಂದಲ್ಲಿ 20 ಪೆಟ್ಟಿಗೆ, 180 ಎಂಎಲ್ 50 ಸಾವಿರ ಮೌಲ್ಯದ ಮದ್ಯ ಸಾಗಿಸುತ್ತಿದ್ದಾಗ ದಾಳಿ ಮಾಡಿ ಮಾಲು ಸಮೇತ ವಶ ಪಡಿಸಿಕೊಳ್ಳಲಾಗಿದೆ. ಅಬ್ದುಲ್ ಸತ್ತಾರ ಆರೋಪಿ ಪರಾರಿಯಾಗಿದ್ದಾನೆ. 2012-13ನೇ ಸಾಲಿನ ಮಾರ್ಚ್-31ಕ್ಕೆ ಮದ್ಯ ಮಾರಾಟದ ಗುರಿ 1.55,179 ಇದ್ದು ಇದರಲ್ಲಿ 1,54, 288 ಮದ್ಯದ ಪೆಟ್ಟಿಗೆ ಮಾರಾಟ ಮಾಡಲಾಗಿದೆ.
ಕಳೆದ ಸ್ಥಳೀಯ ಚುನಾವಣೆಯಲ್ಲಿ 15,309 ಪೆಟ್ಟಿಗೆ ಮಾರಾಟದ ಗುರಿಯಿದ್ದು, ಇದರಲ್ಲಿ 12,649 ಪೆಟ್ಟಿಗೆ ಮದ್ಯ ಮಾರಾಟ ಮಾಡಲಾಗಿದೆ ಎಂದು ಚಿತ್ತಾಪುರ ಉಪ ವಿಭಾಗ ಅಬಕಾರಿ ಅಧೀಕ್ಷಕ ಮೋಯಿನುದ್ದೀನ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement