ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಅಭಿವೃದ್ಧಿಗಾಗಿ ಅವಕಾಶ ನೀಡಿ'

Lingaraj Badiger
Updated On : 22 Apr 2013, 11:39 am

ಯಾದಗಿರಿ: ನನಗೆ ಒಂದು ಬಾರಿ ಅವಕಾಶ ನೀಡಿ. ಮತಕ್ಷೇತ್ರದ ಸಂಪೂರ್ಣ ಚಿತ್ರಣವನ್ನೇ ಬದಲಿಸಿ ತೋರಿಸುತ್ತೇನೆ ಎಂದು ಗುರುಮಠಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ್ ಹೇಳಿದರು.
ಗುರುಮಠಕಲ್ ಮತಕ್ಷೇತ್ರದ ಕೇಶ್ವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದ ಅನೇಕರನ್ನು ಬಿಜೆಪಿಗೆ ಸೇರಿಸಿಕೊಂಡು ಮಾತನಾಡಿದರು. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನೋಪಯೋಗಿ ಕಾರ್ಯಕ್ರಮಗಳು ಹಾಗೂ ಕ್ಷೇತ್ರದಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಸಹಕಾರಿ ಎಂದರು.
ಬರೀ ಭ್ರಷ್ಟಾಚಾರದಲ್ಲೆ: ಹಾಲಿ ಶಾಸಕ ಚಿಂಚನಸೂರ್ ಅವರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಜನಪ್ರತಿನಿಧಿಯಾಗಿ ಮಾಡಬೇಕಾದ ಕರ್ತವ್ಯವನ್ನು ಮರೆತು ಬರೀ ಭ್ರಷ್ಟಾಚಾರದಲ್ಲಿಯೇ ಕಾಲಹರಣ ಮಾಡಿದ್ದಾರೆ. ಕಳಪೆ ಕಾಮಗಾರಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತಿ ರಾಜಕರಣ ಮತ್ತು ಒಡೆದು ಆಳುವುದೇ ಹಾಲಿ ಶಾಸಕರ ಸಾಧನೆಯಾಗಿದೆ ಎಂದು ಹರಿಹಾಯ್ದರು.
ಹಣ ಹೆಂಡದಿಂದ ಎಲ್ಲರನ್ನು ಖರೀದಿಸಬಲ್ಲೆ ಎಂದು ತಿಳಿದಿರುವ ಶಾಸಕರಿಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಅಭ್ಯರ್ಥಿಗಳು ನನ್ನ ಬಗೆ ಸುಳ್ಳು ಸುದ್ದಿಗಳನ್ನು ಹರಡಿಸಿ ಜನತೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಮತದಾರರು ಸುಳ್ಳು ಮಾತುಗಳಿಗೆ ಬೆಲೆ ಕೊಡಬಾರದೆಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಮದ ರವಿಕುಮಾರ್ ಗಾಳ, ಶಿವಕುಮಾರ್, ಶ್ರೀನಿವಾಸ ಗಾಳ, ವಿಷ್ಣುಕುಮಾರ್ ಶಾಪಲಿ, ಸಾಯಿಬಣ್ಣ ಕುಂಬಾರ, ಶ್ರೀನಿವಾಸ, ಪಾಂಡು ಗಾಳ, ವೆಂಕಟೇಶ, ವೆಂಕಟಪ್ಪ ಗೊಲ್ಲ, ವೆಂಕಟಪ್ಪ ಗಾಳ ಮತ್ತು ದೇವರಳ್ಳಿ ಗ್ರಾಮದ ಕೊಲಿ ಸಮಾಜದ ಅಧ್ಯಕ್ಷ ಹಣಮಂತು, ಭೀಮರಾಯ ನಾಯ್ಕೋಡಿ ಇತರರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement