ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಭಿವೃದ್ಧಿಯಲ್ಲಿ ಬಿಜೆಪಿ ಮುಂದೆ: ವಾಲ್ಮೀಕಿ

Lingaraj Badiger
Updated On : 22 Apr 2013, 11:36 am

ಚಿತ್ತಾಪುರ: ರಾಜ್ಯ ಹಾಗೂ ಕ್ಷೇತ್ರ ಅಭಿವೃದ್ಧಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮುಂದೆ ಇದೆ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಹೇಳಿದರು. ತಾಲೂಕಿನ ಅಶೋಕ ನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಈ ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ. ಬಿಜೆಪಿ ಗೆಲವಿಗೆ ಮತದಾರರು ಮನ್ನಣೆ ನೀಡಲಿದ್ದಾರೆ ಎಂದರು. ಮುಖಂಡ ವಿಜಯಕುಮಾರ ದೊಡ್ಮನಿ, ಮಾರುತಿ ಪೂಜಾರಿ, ಪಂಡಿತ ಕಟ್ಟಿಮನಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಭಂಕೂರ ಹೌಸಿಂಗ್ ಸೊಸೈಟಿ ಕಾರ್ಯದರ್ಶಿ ಅಲ್ಲಾವುದ್ದಿನ ಶೆಟ್ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದರು. ಬಿಜೆಪಿ ಮುಖಂಡರಾದ ಡಾ. ಗುಂಡಣ್ಣ ಬಾಳಿ, ರಾಘವೇಂದ್ರ ಪೊಲೀಸ್ ಪಾಟೀಲ್, ಅನೀಲ್ ಜೋಶಿ, ಶರಣು ಜ್ಯೋತಿ, ತಾಪಂ ಸದಸ್ಯ ಮಲ್ಲಿಕಾರ್ಜುನ ಶಿವಗೋಳ ಇದ್ದರು.
ಜಿಲ್ಲೆಯಲ್ಲಿ 131 ಅಭ್ಯರ್ಥಿಗಳು ಕಣದಲ್ಲಿ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಾ ಕಣದಲ್ಲಿರುವ 8 ಮಹಿಳೆಯರು ಹಾಗೂ 123 ಪುರುಷರು ಸೇರಿದಂತೆ ಒಟ್ಟು 131 ಅಭ್ಯರ್ಥಿಗಳಲ್ಲಿ 53 ಪಕ್ಷೇತರರೇ ಸ್ಪರ್ಧಿಸಿರುವುದು ವಿಶೇಷ. ಪಕ್ಷವಾರು ಸ್ಪರ್ಧಿಸಿದ ಹುರಿಯಾಳುಗಳ ವಿವರ ಇಂತಿದೆ. ಕಾಂಗ್ರೆಸ್- 9, ಬಿಜೆಪಿ- 9, ಜೆಡಿಎಸ್- 9, ಬಿಎಸ್‌ಪಿ- 8, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ- 1, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕಿಸ್ಟ್)- 1, ನ್ಯಾಷನಲ್ ಕಾಂಗ್ರೆಸ್ ಪಕ್ಷ- 1, ಮಾನ್ಯತೆ ಪಡೆದ, ಪಡೆಯದ ಇತರೆ ಪಕ್ಷಗಳು- 40 ಮತ್ತು ಪಕ್ಷೇತರರು- 53.
ವೇತನ ಸಹಿತ ರಜೆ ನೀಡಲು ಸೂಚನೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣಾ ದಿನದಂದು ಎಲ್ಲ ಕಾರ್ಖಾನೆ, ಕೈಗಾರಿಕಾ ಸಂಸ್ಥೆ ಮತ್ತು ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆ ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಮತದಾನ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ  ಕರ್ನಾಟಕ ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾನೂನಿನ್ವಯ ಎಲ್ಲ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಎಲ್ಲ ಮಾಲೀಕರು ನಿಯೋಜಕರಿಗೆ ಕಾರ್ಮಿಕ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ. ಈ ಕಾನೂನು ಉಲ್ಲಂಘಿಸುವ ಕಾರ್ಖಾನೆ, ಕೈಗಾರಿಕಾ ಸಂಸ್ಥೆ ಮತ್ತು ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement