ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ

Lingaraj Badiger
Updated On : 22 Apr 2013, 11:39 am

ಶಹಾಪುರ: ಸರ್ವಧರ್ಮದ ಜನತೆಯನ್ನು ಸಮಾನ ಗೌರವಾದರಗಳಿಂದ ಕಂಡಂಥ ಶಿರವಾಳ ಗೌಡರ ಮನೆತನದ ಯುವ ಮುಖಂಡ ಗುರುಪಾಟೀಲ ಶಿರವಾಳ ಅವರನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲರು ಒಗ್ಗೂಡಿ ಚುನಾವಣೆಯಲ್ಲಿ ಆರಿಸಿ ತರಬೇಕು ಎಂದು ಕೆಜೆಪಿ ಮುಖಂಡ ಮಹ್ಮದ್‌ಗೌಸ್ ಕೋಟೆ ಮನವಿ ಮಾಡಿದರು.
ಉತ್ತಮ ವ್ಯಕ್ತಿಗೆ ಅವಕಾಶ ನೀಡಿ: ಪಟ್ಟಣದ ಹಳಪೇಟೆಯಲ್ಲಿ ಕೆಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚುನಾವಣೆ ಜಾತಿಯ ಆಧಾರದ ಮೇಲೆ ನಡೆಯಬಾರದು. ಸರ್ವ ಜನಾಂಗ ಕೂಡಿಕೊಂಡು ಉತ್ತಮ ವ್ಯಕ್ತಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಕೆಜೆಪಿ ಅಭ್ಯರ್ಥಿ ಗುರುಪಾಟೀಲ ಯೋಗ್ಯ ವ್ಯಕ್ತಿಯಾಗಿದ್ದಾರೆ. ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯವನ್ನು ಕೇವಲ ವೋಟ್ ಬ್ಯಾಂಕಾಗಿ ಮಾಡಿಕೊಂಡಿದೆ, ಹೊರತಾಗಿ ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡದೆ ಇಂದಿಗೂ ಜನತೆ ಮೂಲಸೌಲಭ್ಯದಿಂದ ವಂಚಿತವಾಗುವಂತೆ ಮಾಡಿದೆ. ಇನ್ನಾದರೂ ಕಾಂಗ್ರೆಸ್ಸಿಗೆ ತಕ್ಕಪಾಠ ಕಲಿಸಬೇಕೆಂದರು.
ಕೆಜೆಪಿ ತಾಲೂಕು ಅಧ್ಯಕ್ಷ ಭೀಮಯ್ಯಗೌಡ ಕಟ್ಟಿಮನಿ, ಹಿರಿಯ ಮುಖಂಡ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಡಾ.ಚಂದ್ರಶೇಖರ ಸುಬೇದಾರ ಮತ್ತು ಅಭ್ಯರ್ಥಿ ಗುರುಪಾಟೀಲ ಶಿರವಾಳ ಮಾತನಾಡಿ, 10 ವರ್ಷದ ಕಾಂಗ್ರೆಸ್ ಆಡಳಿತವನ್ನು ಶಹಾಪುರ ಮತಕ್ಷೇತ್ರದಲ್ಲಿ ಕೊನೆಗಾಣಿಸಬೇಕು ಎಂಬ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.
ಅನಂತರಾವ ದೇಶಪಾಂಡೆ, ಅಮರೇಶಸ್ವಾಮಿ, ಲಾಲ ಅಹ್ಮದ್ ಖುರೇಶಿ, ಇಬ್ರಾಹಿಂ ಶಿರವಾಳ, ಅಪ್ಪಾಸಾಹೇಬ ದೇಶಮುಖ, ರಾಮಚಂದ್ರ ಕಾಶೀರಾಜ, ಗುರುರಾಜ ದೇಶಪಾಂಡೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement