ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಜೆಪಿಯಲ್ಲಿ ಸಮಬಾಳು, ಸಮಪಾಲು ಸಿದ್ಧಾಂತವಿಲ್ಲ: ಗುತ್ತೇದಾರ ಟೀಕೆ

Lingaraj Badiger
Updated On : 22 Apr 2013, 11:35 am

ಚಿತ್ತಾಪುರ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಮೂಲಕ ಸಾಮಾಜಿಕ ನ್ಯಾಯ ಪಡೆಯಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಸತೀಶ ಗುತ್ತೇದಾರ ಹೇಳಿದರು.
ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ತಾಪಂ, ಗ್ರಾಪಂ ಅಧ್ಯಕ್ಷರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸರ್ವರಿಗೂ ಸಮಪಾಲು ಸಮಬಾಳು ಎಂಬುದು ಬಿಜೆಪಿ, ಕೆಜೆಪಿ ಪಕ್ಷಗಳಲ್ಲಿ ಬೂಟಾಟಿಕೆ. ಆದರೆ ಕಾಂಗ್ರೆಸ್‌ನಲ್ಲಿ ಜಾರಿಗೆ ತಂದು ಕೃತಿಯಲ್ಲಿ ಕೆಲಸ ಮಾಡಿದೆ ಎಂದರು. ಅಭ್ಯರ್ಥಿ ಪ್ರಿಯಾಂಕ್ ಖರ್ಗೆ, ಜಿಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ ಮಾತನಾಡಿದರು. ತಾಪಂ ಸದಸ್ಯೆ ಜಯಶ್ರೀ ಗುತ್ತೇದಾರ, ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಬೆಳಗುಂಪಿ, ಮಾಜಿ ಅಧ್ಯಕ್ಷ ಶಿವಯ್ಯ ಗುತ್ತೇದಾರ, ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಕಾಶಿರಾಯ ನಂದೂರಕರ್, ನ್ಯಾಯವಾದಿ ಹಿರಗಪ್ಪ ಬಾಬನಕರ್, ಯೂಸುಫಮಿಯ್ಯ ಐನೊಳ್ಳಿ, ಸದಸ್ಯ ರಾಜು ಸಿತಾಳೆ, ಲಕ್ಷ್ಮೀಬಾಯಿ ದಂಡೊಗಿ, ಸಾಬಯ್ಯ ಗುತ್ತೇದಾರ, ತಾಲೂಕು ಜೋಗಿ ಸಮಾಜ ಅಧ್ಯಕ್ಷ ದಶರಥ ಸಿತಾಳೆ, ಸಾಬಣ್ಣ ಕಿರಣಗಿ, ಪುಂಡಲಿಕ ರಜಪುತ, ಯಲ್ಲಾಲಿಂಗ ಪೂಜಾರಿ, ಮಲ್ಲಿಕಾರ್ಜುನ ಬಾಬನಕರ್ ಸೇರಿದಂತೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಳಿ, ಜಿಪಂ ಸದಸ್ಯ ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್ ಕರದಾಳ, ಸೋಮಶೇಖರ ಪಾಟೀಲ್, ಜಗದೀಶ ಶಿಂಧೆ, ಡಾ. ಪ್ರಭುರಾಜ ಕಾಂತಾ, ನಾಗಯ್ಯ ಗುತ್ತೇದಾರ, ವಿನೋದ ಗುತ್ತೇದಾರ, ಶಿವರುದ್ರ ಭೀಣಿ, ಸಿದ್ಧಮ್ಮ ಕಾಶನೂರ, ಮಲ್ಲಪ್ಪ ಹೊಸ್ಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement