ಶಿಕ್ಷಕರ ಅಮಾನತು
ಯಾದಗಿರಿ: ಮತಗಟ್ಟೆ ಸಿಬ್ಬಂದಿಯೆಂದು ಹೊರಡಿಸಿದ್ದ ಆದೇಶ ಸ್ವೀಕರಿಸದ ಹಾಗೂ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು ಹೋಗಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ 4 ಜನ ಶಿಕ್ಷಕರನ್ನು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಅಮಾನತು ಮಾಡಿ ಭಾನುವಾರ ಆದೇಶಿಸಿದ್ದಾರೆ.
ಶಹಾಪುರ ತಾಲೂಕಿನ ಕುಮನೂರು ಸರ್ಕಾರಿ ಶಾಲೆ ಸಹ ಶಿಕ್ಷಕ ಶಶಿಧರ ಬಡಿಗೇರ, ಶಹಾಪುರ ತಾಲೂಕಿನ ಗೋಗಿ ಕನ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಶಾಂತಪ್ಪ, ಬಬಲಾದ ಶಾಲೆಯ ನಿರ್ಮಲಾ ಹಾಗೂ ಅನಿತಾ ಅಮಾನತುಗೊಂಡ ಶಿಕ್ಷಕರು.
ಮತಗಟ್ಟೆ ಅಧಿಕಾರಿಗಳೆಂದು ಹೊರಡಿಸಿದ ಆದೇಶವನ್ನು ಸ್ವೀಕರಿಸದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಲ್ಲಿಸಿದ ವರದಿ ಹಿನ್ನೆಲೆಯಲ್ಲಿ ಈ ನೌಕರರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ಆದೇಶ ಸ್ವೀಕರಿಸದೇ ಹಾಗೂ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟಿರುವುದರಿಂದ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.