ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿಂಚನಸೂರ ಬಿರುಸಿನ ಪ್ರಚಾರ

Rashmi Kasaragodu
Updated On : 23 Apr 2013, 12:23 pm

ಕನ್ನಡಪ್ರಭ ವಾರ್ತೆ, ಗುರುಮಠಕಲ್, ಏ.22
ಮತಕ್ಷೇತ್ರ ವ್ಯಾಪ್ತಿಯ ಮಲ್ಕಪನಳ್ಳಿ, ಯರಗೋಳ, ವಡ್ಡನಳ್ಳಿ, ಕ್ಯಾಸಪನಳ್ಳಿ, ಖಾನಳ್ಳಿ, ಅರಿಕೇರಾ ಬಿ., ಅಚ್ಚೋಲಾದಲ್ಲಿ ಮನೆ ಮನೆಗೆ ತೆರಳಿ ಶಾಸಕ ಬಾಬುರಾವ ಚಿಂಚನಸೂರ ಬಿರುಸಿನ ಪ್ರಚಾರ ನಡೆಸಿದರು.
ಯರಗೋಳ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಚಿಂಚನಸೂರ, ಕೇಂದ್ರ ಸಚಿವ ಖರ್ಗೆ ಅವರ ಆಶೀರ್ವಾದದಿಂದ ನಾನು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಈ ಭಾಗದಲ್ಲಿ ಅನೇಕ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಕಡೆಚೂರ ಗ್ರಾಮದಲ್ಲಿ 39 ಬೃಹತ್ ಕೈಗಾರಿಕೆ ಸ್ಥಾಪನೆಗೆ ಶ್ರಮಿಸಿದ್ದೇನೆ ಎಂದರು.
ಭರವಸೆ: ಇದು ನನ್ನ ಕೊನೆಯ ಚುನಾವಣೆ. ನಾನು ಈ ಕ್ಷೇತ್ರಕ್ಕೆ ಪ್ರಮುಖ ಮೂರು ಕೊಡುಗೆಗಳನ್ನು ಕೊಡಬೇಕಾಗಿದೆ. ಕೆರೆಗಳಿಗೆ ಭೀಮಾ ನದಿಯಿಂದ ನೀರು ತುಂಬಿಸಿ ಈ ಭಾಗದ ಎಲ್ಲ ರೈತರು ನೆಮ್ಮದಿಯಿಂದ ಬದುಕಬೇಕು. ನಿರುದ್ಯೋಗ ಸಮಸ್ಯೆ ನಿವಾರಿಸಲು ಈಗಾಗಲೇ ಮಂಜೂರಾಗಿರುವ ಕೈಗಾರಿಕೆಗಳಿಂದ ಕೆಲಸ ಪ್ರಾರಂಭಿಸುವುದು ಹಾಗೂ ಗುಳೆ ಹೋಗುವುದನ್ನು ತಪ್ಪಿಸುವುದು ಮುಖ್ಯವಾಗಿದೆ. ಆದ್ದರಿಂದ ಈ ಬಾರಿ ಬಹುಮತದಿಂದ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮಟ್ಟಣ್ಣವರ ಬಾಂಬ್ ಇಟ್ಟವರು: ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ 5 ವರ್ಷಗಳಲ್ಲಿ 3 ಪಕ್ಷಗಳನ್ನು ಹುಟ್ಟು ಹಾಕಿದೆ. ಭ್ರಷ್ಟಾಚಾರ, ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರ ಖರೀದಿ ಮುಂತಾದ ಹಗರಣಗಳಿಂದ ಜನತೆ ಬೇಸತ್ತಿದ್ದಾರೆ. ಜೆಡಿಎಸ್ ಅಪ್ಪ- ಮಕ್ಕಳ ಪಕ್ಷವಾಗಿದೆ. ಬಿಜೆಪಿಯ ಗಿರೀಶ್ ಮಟ್ಟಣ್ಣವರ ಶಾಸಕರ ಭವನದಲ್ಲಿ ಬಾಂಬ್ ಇಟ್ಟವರು. ದೂರದ ಧಾರವಾಡದಿಂದ ಬಂದು ಚುನಾವಣೆಗೆ ನಿಂತಿದ್ದು, ಅವರನ್ನು ಆರಿಸಿ ತಂದರೆ ಇಡೀ ಕ್ಷೇತ್ರವನ್ನು ಮಾರಿ ಧಾರವಾಡಕ್ಕೆ ಜಾಗ ಖಾಲಿ ಮಾಡುತ್ತಾರೆಂದು ಆರೋಪಿಸಿದರು.
  ಹೀಗಾಗಿ ಸಮೀಕ್ಷೆಗಳು ಹೇಳುವ ಪ್ರಕಾರ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನನ್ನನ್ನು ಬಹುಮತಗಳಿಂದ ಆರಿಸಿ ತರಬೇಕು. ಆಗ ಸಂಪುಟದಲ್ಲಿ ಪ್ರಮುಖ ಖಾತೆ ಹೊಂದುವ ಮೂಲಕ ಜತೆಗೆ ಈ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಸಹಕರಿಸಬೇಕೆಂದು ಹೇಳಿದರು.
ಮಹಿಪಾಲರೆಡ್ಡಿ ಹತ್ತಿಕುಣಿ, ಶರಣಪ್ಪ ಮಾನೆಗಾರ, ಶರಣಪ್ಪ ಸೋಮಣ್ಣೋರ್, ಸಾಯಿಬಣ್ಣ ಬೋರಬಂಡಾ, ಶ್ರೀಲಕ್ಷ್ಮಿ ಚಂಡ್ರಕಿ, ಸಾವಿತ್ರಮ್ಮ, ಶರಣಪ್ಪ ಮೋಟನಳ್ಲಿ, ವೀರಭದ್ರಪ್ಪ, ಅಮರೇಶ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement