ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತರಬೇತಿಗೆ ಹಾಜರಾಗಲು ಮತಗಟ್ಟೆ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ

Rashmi Kasaragodu
Updated On : 23 Apr 2013, 12:24 pm

ಯಾದಗಿರಿ: ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ತರಬೇತಿಗೆ ನಿಯೋಜಿತ ಕೆಲ ನೌಕರರು ಗೈರು ಹಾಜರಾಗಿರುವುದು ಗಮನಕ್ಕೆ ಬಂದಿದೆ. ಅಂಥವರು ಏ.29ರಂದು ಜರುಗುವ ತರಬೇತಿಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
  ಕೆಲವು ನೌಕರರು ಚುನಾವಣಾ ನೇಮಕಾತಿ ಆದೇಶಗಳನ್ನು ಸ್ವೀಕರಿಸಲು ನಿರಾಕರಿಸಿರುವುದು ತಿಳಿದುಬಂದಿದೆ.  ಈಗಾಗಲೇ ಇಂತಹ 4 ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಚುನಾವಣೆ ಕೆಲಸಕ್ಕೆ ಗೈರು ಹಾಜರಾಗಿರುವುದು ಕರ್ತವ್ಯ ಲೋಪ ಎಂದು ಪರಿಗಣಿಸಿ, ಅಂಥವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ.
  ಆದೇಶ ಸ್ವೀಕರಿಸಲು ನಿರಾಕರಿಸಿದ ನೌಕರರು ಆಯಾ ಕಚೇರಿಯ ಮುಖ್ಯಸ್ಥರಿಂದ ನೇಮಕಾತಿ ಆದೇಶಗಳನ್ನು ತಕ್ಷಣ ಸ್ವೀಕರಿಸಬೇಕು. ತರಬೇತಿಗೆ ಗೈರು ಹಾಜರಾದ ನೌಕರರು ತಮ್ಮ ವಿವರಣೆಯನ್ನು ಜಿಲ್ಲಾಧಿಕಾರಿಗೆ ನೀಡಿ ಏ.29ರಂದು ಜರುಗುವ ತರಬೇತಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ನೌಕರರು ಚುನಾವಣೆ ಕೆಲಸಕ್ಕೆ ಗೈರು ಹಾಜರಾದಲ್ಲಿ ಆಯಾ ಕಚೇರಿಯ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೂ ಆಗಿರುವ ರಾಜೇಂದ್ರ ಚೋಳನ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement