ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಾಟೀಲ್ ಪರ ಲಕ್ಷ್ಮೀನಾರಾಯಣ ಪ್ರಚಾರ

Rashmi Kasaragodu
Updated On : 23 Apr 2013, 12:22 pm

ಕನ್ನಡಪ್ರಭ ವಾರ್ತೆ, ಆಳಂದ, ಏ.22
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರಿಗೆ ಮತ್ತು ನೇಕಾರರಿಗೆ ಸೇರಿ ಎಲ್ಲ ವರ್ಗದ ಜನ ಸಾಮಾನ್ಯರಿಗೆ ನೀಡಿದ ಯೋಜನೆಗಳನ್ನು ಹಿಂದೆ ಯಾವ ಸರ್ಕಾರಗಳೂ ನೀಡಿಲ್ಲ. ಇಂಥ ಧೀಮಂತ ನಾಯಕರ ಕೈ ಬಲಪಡಿಸಲು ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲರಿಗೆ ಮತ ನೀಡಬೇಕೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ ಹೇಳಿದರು.
ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ನೇಕಾರರ ಮತ್ತು ರೈತರ ಸಭೆಯಲ್ಲಿ ಮಾತನಾಡಿ, ಬಿ.ಆರ್. ಪಾಟೀಲರಂತ ಒಳ್ಳೆಯ ನಾಯಕರು ವಿಧಾನಸಭೆಯಲ್ಲಿ ಇರಬೇಕು ಎಂಬ ಉದ್ದೇಶದಿಂದ ದೂರದಿಂದ ಪ್ರಚಾರಕ್ಕೆ ಬಂದಿದ್ದೇವೆ. ಅವರ ಅಭಿವೃದ್ಧಿ ಚಿಂತಕರು ದೂರದೃಷ್ಟಿಯ ನೇತಾರರಾಗಿದ್ದು ಹೆಚ್ಚಿನ ಮತಗಳನ್ನು ನೀಡಿ ಅವರಿಗೆ ಗೆಲ್ಲಿಸಬೇಕು ಎಂದರು.
ಹಿಂದಿನ ಯಾವ ಸರ್ಕಾರವು ನೇಕಾರರಿಗೆ ಸ್ಪಂದಿಸಿಲ್ಲ. ರಾಜ್ಯದಲ್ಲಿರುವ 60 ಸಾವಿರ ಜನರಿದ್ದು, ಅವರಿಗಾಗಿ ಯಡಿಯೂರಪ್ಪ ಅವರು 60 ಕೋಟಿ ನೀಡಿದ ಬಜೆಟ್ ಹಾಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಖರ್ಚು ಮಾಡುವ ಬದಲು 30 ಕೋಟಿ ಕಡಿತಗೊಳಿಸಿದ್ದಾರೆ. ಕೆಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಭವಿಷ್ಯ ನಿರ್ಮಾಣವಾಗಲಿದೆ. ಕೆಜೆಪಿಗೆ ಬೆಂಬಲಿಸಿ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಪುರಸಭೆ ಮಾಜಿ ಸದಸ್ಯ ಗುರುನಾಥ ಷಣ್ಮೂಖ, ಡಾ. ಎಸ್.ಎ. ಕೋಗನೂರೆ ಮಾತನಾಡಿದರು. ಮಲ್ಲಿನಾಥ ಯಳಮೇಲಿ, ಪುರಸಭೆ ಸದಸ್ಯ ಕಮಲಾಬಾಯಿ ಬುಲಬುಲೆ, ಗುರುನಾಥ ಕಳಸೆ, ಅಶೋಕ ಇಟಾಮಳೆ, ಶಾಂತಪ್ಪ ಬುಳ್ಳಾ, ಮಹೇಶ ಹಿರೋಳಿ, ಇಕ್ಬಾರ ಬಿಲಗುಂದಿ ಇದ್ದರು. ಅಶೋಕ ರೆಡ್ಡಿ ನಿರೂಪಿಸಿದರು. ಸಂಪತಕುಮಾರ ವೇದಪಾಠಕ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement