ಬಿಎಸ್‌ಆರ್ ಕಾಂಗ್ರೆಸ್ ಸೇರ್ಪಡೆ
ಯಾದಗಿರಿ: ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಿಎಸ್ಸಾರ್ ಕಾಂಗ್ರೆಸ್ ಉದಯವಾಗಿದೆ. ಇದುವರೆಗೆ ಆಡಳಿತ ನಡೆಸಿದವರೆಲ್ಲ ಹಿಂದುಳಿದವರ ಕಲ್ಯಾಣಕ್ಕಾಗಿ ಚಿಂತಿಸಿಲ್ಲ. ಆದ್ದರಿಂದ ಈ ಬಾರಿ ಬಿಎಸ್ಸಾರ್ ಬೆಂಬಲಿಸಿ ಎಂದು ಕ್ಷೇತ್ರದ ಅಭ್ಯರ್ಥಿ ಮೌಲಾಲಿ ಅನಪುರ ಹೇಳಿದರು. ಅವರು ನಗರದ ವಾರ್ಡ್ ನಂ.18ರ ಕಾಂಗ್ರೆಸ್, ಜೆಡಿಎಸ್‌ನ ಯುವ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದರು. ಮಲ್ಲಿನಾಥ ಸುಂಗಲಕರ್, ಪ್ರಭು ಬುಕ್ಕಲ್, ವೀರಭದ್ರಪ್ಪ, ಭೀಮರಾಯ ಸುಂಗಲಕರ್, ಸೈದಪ್ಪ ಕೂಲೂರ, ಚಂದ್ರ ಚಟ್ಟರಕರ್, ಅನೀಲ ಸಾಗರ, ಮರೆಪ್ಪ ಕಾಗಿ, ರವಿಕಿರಣ, ಕಾಶಿನಾಥ ತಳಕ ಬಿಎಸ್ಸಾರ್ ಸೇರ್ಪಡೆಯಾದರು.
ಪಾದಯಾತ್ರೆ ಮೂಲಕ ವಣಿಕ್ಯಾಳ ಮತ ಬೇಟೆ
ಕೆಂಭಾವಿ: ಶಹಾಪುರ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಶಂಕ್ರಣ್ಣ ವಣಿಕ್ಯಾಳ ಅವರು ಹೂವಿನಹಳ್ಳಿ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದರು. ಅವರು ಮಾತನಾಡಿ, ಈ ಭಾಗದ ಅಭಿವೃದ್ಧಿಗೆ ನಾನು ಮಾಡಿದ ಸೇವೆ ಎಲ್ಲರ ಮನಸ್ಸಿನಲ್ಲಿ ಉಳಿದಿದೆ. ಜನತೆ ಕುಟುಂಬ ರಾಜಕಾರಣಕ್ಕೆ ಜೋತು ಬೀಳದೇ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಗೆ ನಾಂದಿ ಹಾಡಬೇಕು. ಬಡವರು, ರೈತರು, ಶ್ರಮಿಕರ ಉದ್ಧಾರದ ಕನಸು ಇಟ್ಟುಕೊಂಡು ಶ್ರೀರಾಮುಲು ಅವರು ಪಕ್ಷ ಕಟ್ಟಿದ್ದಾರೆ. ಜನರು ಈ ಬಾರಿ ನನ್ನನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ಬಹುಮತದಿಂದ ಆರಿಸಿ ತಂದು, ಈ ಭಾಗದ ಅಭಿವೃದ್ಧಿಗೆ ನನಗೆ ಸಹಕಾರಿಯಾಗಿ ಎಂದು ಮನವಿ ಮಾಡಿದರು. ನಾನಾಗೌಡ ಚೌಧರಿ, ಬಸನಗೌಡ ಸಾಹೇಬಗೌಡ ಬಿರಾದಾರ, ಮಲ್ಲಣ್ಣ ಬಿರಾದಾರ, ಶಿವಪುತ್ರಪ್ಪ ಬಿರಾದಾರ, ರಾಮಪ್ಪ ದೊರಿ, ಭೀಮಪ್ಪ ಹರಿಜನ, ಮಕ್ಕಾ ಸಾಬ್, ಶಂಕ್ರಗೌಡ ಚೌಧರಿ, ಸೋಮರಾಯ ದೊರಿ, ತಿಮ್ಮಯ್ಯ ಮೋಪಗಾರ, ಸುಭಾಸಗೌಡ ಇತರರು ಕಾಂಗ್ರೆಸ್ ತೊರೆದು ಬಿಎಸ್ಸಾರ್ ಕಾಂಗ್ರೆಸ್ ಸೇರಿದರು.
ವಿವಿಧ ಕಾರ್ಯಕರ್ತರು
ಕಾಂಗ್ರೆಸ್ ಸೇರ್ಪಡೆ
ಸುರಪುರ: ಇಲ್ಲಿಯ ಮೇದಾಗಲ್ಲಿ ವಾರ್ಡಿನ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಯುವ ಮುಖಂಡ ರಾಜಾ ಶ್ರೀರಾಮನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕನಕಾಚಲ ಕನಕಗಿರಿ, ಪರಶುರಾಮ ಪಾಟೀಲ, ಹಣಮಂತ ಕರಿಕಲ್, ರತ್ನಪ್ಪ ಕನಕಗಿರಿ, ಮೌನೇಶ ಮಿಠಾಯಿ, ನಾಗರಾಜ ಬಡಿಗೇರ ಇತರರು ಕಾಂಗ್ರೆಸ್ ಸೇರಿದರು. ಕೂಡಲಗಿ ಗ್ರಾಮದ ಬಲವಂತ್ರಾಯಗೌಡ ಮೇಟಿ, ತಿಮ್ಮಣ್ಣ ಶಹಾಪುರ, ಸಿದ್ದಾರೂಢ, ಹಳ್ಳೆಪಗೌಡ, ರಾಮನಗೌಡ, ಬಾಪುಗೌಡ, ಭೀಮನಗೌಡ ಇತರರು ಸೇರಿದರು.