ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

394 ಸಿಬ್ಬಂದಿಗೆ ಚುನಾವಣಾ ತರಬೇತಿ

Lingaraj Badiger
Updated On : 24 Apr 2013, 11:08 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.23
ಚಿಂಚೋಳಿ ಮೀಸಲು ವಿಧಾನಸಭೆ ಚುನಾವಣೆ ಮತಕ್ಷೇತ್ರದ ಮೊದಲ ಹಂತದ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಮಾಹಿತಿ ತರಬೇತಿ ನೀಡಲಾಯಿತು.
ಪಟ್ಟಣದ ಚಂದಾಪುರ ನಗರದಲ್ಲಿರುವ ಸಿ.ಬಿ. ಪಾಟೀಲ್ ಕಲಾ ಮತ್ತು ವಾಣಿಜ್ಯ ಕಾಲೇಜಲ್ಲಿ ಏರ್ಪಡಿಸಿದ ತರಬೇತಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ, ಮತಯಂತ್ರಗಳ ಬಗ್ಗೆ  ಮತ್ತು ಮತದಾನ ದಿನದಂದು ಮಾಡಬೇಕಾದ ಕಾರ್ಯಗಳ ಬಗ್ಗೆ ನ್ಯಾಯಸಮ್ಮತವಾಗಿ ಮತ್ತು ಚುನಾವಣೆಯನ್ನು ಸೂಸುತ್ರವಾಗಿ ನಡೆಸಲು ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.
ಗೈರಾದರೆ ಶಿಸ್ತು ಕ್ರಮ: 8 ಕೋಣೆಗಳಲ್ಲಿ ನಡೆದ ತರಬೇತಿಯಲ್ಲಿ 10 ಜನ ಸಂಪನ್ಮೂಲ ವ್ಯಕ್ತಿಗಳಿಂದ ಹಾಗೂ 10 ಜನ ಇವಿಎಂ ಎಂಜಿನಿಯರುಗಳಿಂದ ದೃಶ್ಯ ಮಾಧ್ಯಮದ ಮೂಲಕ ತರಬೇತಿ ನೀಡಲಾಯಿತು. 2ನೇ ಹಂತದ ತರಬೇತಿಯನ್ನು ಏ.30ರಂದು ನಡೆಸಲಾಗುವುದು. ಎಲ್ಲ ಮತಗಟ್ಟೆ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು, ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಕೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ತರಬೇತಿಯಲ್ಲಿ 394 ಸಿಬ್ಬಂದಿ ಭಾಗವಹಿಸಿದ್ದರು. ಬಿಸಿಯೂಟ ಯೋಜನಾ ಸಹಾಯಕ ನಿರ್ದೇಶಕ ಜನಾರ್ದನರೆಡ್ಡಿ ಪಾಟೀಲ್, ಮಲ್ಲಿಕಾರ್ಜುನ ಪಾಲಾಮೂರ, ಶ್ರೀನಿವಾಸ ಪಾಟೀಲ್, ರೇವಣಸಿದ್ದಪ್ಪ ದಂಡಿನ್, ಜಗನ್ನಾಥರೆಡ್ಡಿ ರಂಜೋಳ, ಜಯಪ್ಪ ಚಾಪಲ್, ನಾಗೇಶ ಭದ್ರಶೆಟ್ಟಿ ಇತರರು ತರಬೇತಿ ನೀಡಿದರು.
ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಚುನಾವಣಾ ವೀಕ್ಷಕಿ ಸಿ.ಎ. ಲತಾ, ಸಹಾಯಕ ಚುನಾವಣಾಧಿಕಾರಿ ಮೋಹನ್ ಜೋಶಿ, ತಹಸೀಲ್ದಾರ್ ಜಗನ್ನಾಥರೆಡ್ಡಿ ಧರ್ಮರೆಡ್ಡಿ, ಕಂದಾಯ ನಿರೀಕ್ಷಕ ಮನೋಹರ ದೇಗಲಮಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement