ಅಭಿವೃದ್ಧಿಗಾಗಿ 'ಕೈ' ಬೆಂಬಲಿಸಿ: ಅಜಯಸಿಂಗ್
ಜೇವರ್ಗಿ: ತಾಲೂಕು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಕ್ಷೇತ್ರದ ಜನತೆ ಕಾಂಗ್ರೆಸ್ ಬೆಂಬಲಿಸಬೇಕೆಂದು ಅಭ್ಯರ್ಥಿ ಡಾ. ಅಜಯಸಿಂಗ್ ಹೇಳಿದರು. ತಾಲೂಕಿನ ಆಂದೋಲಾ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡುತ್ತ, ಹೈ-ಕ ಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಸಂವಿಧಾನದ 371(ಜೆ)ಕಲಂಗೆ ತಿದ್ದುಪಡಿ ತಂದಿದೆ ಎಂದರು. ಕಡಾ. ಅಜಯಸಿಂಗ್ ಸಮ್ಮುಖದಲ್ಲಿ ತಾಲೂಕಿನ ರಾಂಪುರ ಗ್ರಾಮದ ದೇವಿಂದ್ರಪ್ಪ ನಾಯ್ಕೋಡಿ, ಮರೆಪ್ಪ ಹೊನ್ನಾಳ, ಷಣ್ಮುಖಯ್ಯ ಹಿರೇಮಠ, ಮರೇಪ್ಪ ನಾಯ್ಕೋಡಿ ಸೇರಿದಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.