ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾರು ಪಲ್ಟಿ: ಅಜಯಸಿಂಗ್‌ಗೆ ಗಾಯ

Lingaraj Badiger
Updated On : 24 Apr 2013, 11:07 am

ಗುಲ್ಬರ್ಗ: ಮಾಜಿ ಸಿಎಂ, ಸಂಸದ ಧರಂಸಿಂಗ್ ಪುತ್ರ ಡಾ. ಅಜಯ ಸಿಂಗ್ ಅವರು ನೆಲೋಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ವಸ್ತಾರೆ ಗ್ರಾಮಕ್ಕೆ ತೆರಳುತ್ತಿದ್ದಾಗ ಅವರ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ತಡರಾತ್ರಿ ಜರುಗಿದೆ.
ಜೇವರ್ಗಿ ತಾಲೂಕಿನ ವಸ್ತಾರಿ ಗ್ರಾಮದಲ್ಲಿ ರಾತ್ರಿ ಆಯೋಜಿಸಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಲು ತೆರಳುತ್ತಿದ್ದಾಗ ವಸ್ತಾರಿ- ಹಿಪ್ಪರಗಾ ಎಸ್.ಎನ್ ಗ್ರಾಮಗಳ ಮಧ್ಯೆ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ವಸ್ತಾರಿಯ ಸಿದ್ದಲಿಂಗ ಕೆರೂರ ತಿಳಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಗೆ ತಡವಾದ ಕಾರಣ ಚಾಲಕ ಅತೀ ವೇಗವಾಗಿ ವಾಹನ ಚಲಿಸುತ್ತಿದ್ದು, ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಈ ವೇಳೆ ಸಣ್ಣಪುಟ್ಟ ಗಾಯಗೊಂಡ ಚಾಲಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ ಸಿಂಗ್ ಅವರು ಗುಲ್ಬರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅವರು 'ಕನ್ನಡಪ್ರಭ'ಕ್ಕೆ ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement