ಚುನಾವಣೆ ಅಕ್ರಮ ತಡೆಗೆ ಹದ್ದಿನ ಕಣ್ಣು
ಆಳಂದ: ಕ್ಷೇತ್ರದಲ್ಲಿ ಈಚೆಗಷ್ಟೇ 10 ಲಕ್ಷ ರುಪಾಯಿ, ಅಕ್ರಮವಾಗಿ ಮದ್ಯ ಸಾಗಾಟವನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿದ ಬೆನ್ನೆಲೆಯೇ ಈಗ ಚುನಾವಣೆ ಆಯೋಗದ ಅಧಿಕಾರಿಗಳು ಅಕ್ರಮ ಚಟುವಟಿಕೆ ತಡೆಗೆ ಹದ್ದಿನ ಕಣ್ಣಿಟ್ಟಿದ್ದಾರೆ.
ಗಡಿಭಾಗದ ಖಜೂರಿ, ಹಿರೋಳಿ, ಆಳಂದ, ನಿಂಬಾಳ, ಮಾದನಹಿಪ್ಪರಗಾ ಕಡೆ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ. ಮಧ್ಯಭಾಗದಲ್ಲಿ ಗಸ್ತು ನಡೆಸುವ ಮೂಲಕ ಅಕ್ರಮ ತಡೆಗೆ ಕಾವಲಿಟ್ಟಿದ್ದಾರೆ. ರಾಜ್ಯವಷ್ಟೇ ಅಲ್ಲ. ನೆರೆಯ ಮಹಾರಾಷ್ಟ್ರದಲ್ಲೂ ಗಮನ ಸೆಳೆದುಕೊಂಡಿರುವ ಆಳಂದ ಮತಕ್ಷೇತ್ರದ ಚುನಾವಣೆಗೆ ಆಯೋಗವು ತಾತ್ಕಾಲಿಕ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ. ಆದರೂ ಅಕ್ರಮ ಬಹುತೇಕವಾಗಿ ನಿಂತಿಲ್ಲ ಎನ್ನಲಾಗಿದೆ.
ಏನಂತಾರೆ ಅಧಿಕಾರಿಗಳು? ಅಕ್ರಮ ತಡೆಗೆ ಎಲ್ಲ ಗಡಿಯಲ್ಲೂ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಾಲ್ವರು ಪ್ಲೆಯಿಂಗ್ ಸ್ಕ್ವಾಡ್ಸ್, ಪ್ಯಾರಾ ಮಿಲಿಟ್ರಿ, ಒಬ್ಬ ಚುನಾವಣಾ ವೀಕ್ಷಕರು, ಪೊಲೀಸರ ಮೂಲಕ ನಿಗಾವಹಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಡಾ. ರಾಜಣ್ಣ ಬಿ ತಿಳಿಸಿದ್ದಾರೆ.