ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಂಪು ಪಾನೀಯದ ಬಾಟಲಿಯೊಳಗೆ ಗುಟುಕಾ ಚೀಟಿ

Lingaraj Badiger
Updated On : 24 Apr 2013, 11:14 am

ಯಾದಗಿರಿ: ಬಿರು ಬಿಸಿಲಿನ ಬೆಂಡಾದ ಜಿಲ್ಲೆಯ ಜನತೆ ತಂಪು ಪಾನೀಯ ಸೇವಿಸುವ ಮುನ್ನ ಒಮ್ಮೆ ಯೋಚಿಸಬೇಕು. ಏಕೆಂದರೆ ಹೀಗೆ ತಂಪು ಪಾನಿಯ ಸೇವಿಸಲು ಹೋದವರೇ ಬೆಚ್ಚಿ ಬಿದ್ದ ಪ್ರಸಂಗ ಇಲ್ಲಿ ನಡೆದಿದೆ.
ಶಹಾಪುರ ತಾಲೂಕಿನ ಗುರುಸುಣಗಿ ಗ್ರಾಮದ ಅಂಗಡಿಯೊಂದರಲ್ಲಿ ಖರೀದಿಸಿದ 7ಅಪ್ ಬಾಟಲಿಯೊಳಗೆ ಗುಟುಕಾ ಚೀಟಿ ಸಿಕ್ಕಿದೆ.
ಗುರುಸುಣಗಿ ಗ್ರಾಮದಲ್ಲಿ ಜಿಲ್ಲಾ ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ ಅವರು ಚುನಾವಣಾ ಜಾಗೃತಿ ಸಭೆ ನಂತರ ತಂಪು ಪಾನಿಯ ಕುಡಿಯಲು ಬಾಟಲಿ ಖರೀದಿಸಿದಾಗ ಅದರಲ್ಲಿ ಗುಟುಕಾ ಚೀಟಿ ಕಂಡು ದಂಗಾದ ಘಟನೆ ಜರುಗಿತು. ಗ್ರಾಮದ ಕಾಶಪ್ಪ ಎಂಬುವರ ಹೋಟಲ್‌ನಲ್ಲಿ ಬಾಟಲಿ ಖರೀದಿಸಿದಾಗ, ಅದರಲ್ಲಿ ಮಲಾನ ಎಂಬ ಹೆಸರಿನ ಗುಟಖಾ ಚೀಟಿ ಹಾಗೂ ಗುಟಖಾ ಪುಡಿ ನೇತಾಡುತ್ತಿರುವುದು ಕಂಡು ಬಂತು ಎಂದು ಉಮೇಶ ತಿಳಿಸಿದ್ದಾರೆ.
ದಿಗ್ಭ್ರಮೆ: ಬಿಸಿಲಿನ ಬೇಗೆಯಿಂದ ಬಳಲಿದ್ದ ನಾನು, ತಂಪು ಪಾನಿಯದಲ್ಲಿನ ಗುಟಖಾ ಚೀಟಿ ಕಂಡು ಬೆವರಿ ಬಸವಳಿಯುವಂತಾಯಿತು ಎಂದು ಅವರು ತಿಳಿಸಿದ್ದಾರೆ. ಮೊದಲೇ ದೇಶದ ಜನರನ್ನು ಹಗಲು ದರೋಡೆ ಮಾಡುತ್ತಿರುವ ಎಂಎನ್‌ಸಿ ಕಂಪನಿಗಳು ತಂಪು ಪಾನಿಯ ತಯಾರಿಕೆಯಲ್ಲಿ ಈ ರೀತಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರುವುದು ಆತಂಕದ ಸಂಗತಿಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಈ ತಂಪು ಪಾನೀಯ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಲೈಫ್ ಈಸ್ ಶಾರ್ಟ್, ಲೈವ್ ಇಟ್ ಅಪ್ ಎಂಬ ಸ್ಲೋಗನ್ ಮೂಲಕ ಪಾನೀಯ ಮಾರಾಟ ಮಾಡುವ ಕಂಪನಿ ಈ ಭಾಗದ ಅದರಲ್ಲೂ ಗ್ರಾಮೀಣ ಭಾಗದ ಅನಕ್ಷರಸ್ಥರ ಜೀವನವನ್ನು ಇನ್ನಷ್ಟು ಶಾರ್ಟ್ ಮಾಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement