ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತದಾನ ಮಹತ್ವ ಸಾರಲು ಗ್ಲೈಡಿಂಗ್

Lingaraj Badiger
Updated On : 24 Apr 2013, 11:14 am

ಯಾದಗಿರಿ: ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಪ್ಯಾರಾ ಗ್ಲೈಡಿಂಗ್ ತಂಡವು ಮಂಗಳವಾರ ಇಲ್ಲಿಗೆ ಆಗಮಿಸಿದೆ. ಏ. 24ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಯಾರಾ ಗ್ಲೈಡಿಂಗ್ ಹಾರಾಟ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ತಿಳಿಸಿದರು.
ಏ.24ರಂದು ಬೆಳಗ್ಗೆ 7 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಯಾರಾ ಗ್ಲೈಡಿಂಗ್ ಮೂಲಕ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ. ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಅವರ ಕೋರಿಕೆ ಮೇರೆಗೆ ಈ ತಂಡವನ್ನು ಬುಧವಾರದವರೆಗೆ ಇರಲು ಚುನಾವಣಾ ಆಯೋಗವು ಅನುಮತಿ ನೀಡಿದ್ದು, 7 ಸದಸ್ಯರನ್ನು ಒಳಗೊಂಡ ತಂಡ ಮತ್ತು ಇಬ್ಬರು ಪ್ಯಾರಾಗ್ಲೈಡರ್ ಚಾಲಕರು ಏ. 24ರಂದು ಬೆಳಗ್ಗೆ 7ಗಂಟೆಯಿಂದ ಪ್ಯಾರಾ ಗ್ಲೈಡಿಂಗ್ ಮಾಡಿ ಜಿಲ್ಲೆಯ ಮತದಾರರಿಗೆ ಆಗಸದಿಂದ ಮತದಾನದ ಮಹತ್ವ ಸಾರುವ ಕರಪತ್ರಗಳನ್ನು ವಿತರಿಸಲಿದೆ.
ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಈ ಮತದಾನ ಜಾಗೃತಿ ಕಾರ್ಯಕ್ಕೆ ಮತ್ತು ಪ್ಯಾರಾ ಗ್ಲೈಡಿಂಗ್ ಚಟುವಟಿಕೆಗೆ ಚಾಲನೆ ನೀಡುವರು. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂತಹ ಪ್ರಯೋಗ ಮಾಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೂತನ ಜಿಲ್ಲಾ  ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ಈ ಪ್ಯಾರಾ ಗ್ಲೈಡಿಂಗ್ ವೀಕ್ಷಿಸಬೇಕೆಂದು ಅವರು ತಿಳಿಸಿದ್ದಾರೆ. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿ ಅದರಲ್ಲಿ ಕುಳಿತು ಛಾಯಾಚಿತ್ರಕ್ಕೆ ಫೋಸ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement