ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದೇಶಿ ಕಂಪನಿಗಳ ದಾಸ್ತಾನಿಂದ ತೊಗರಿ ಬೆಲೆ ಕುಸಿತ: ಮಾನ್ಪಡೆ

Lingaraj Badiger
Updated On : 25 Apr 2013, 10:59 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.24
ಸರ್ಕಾರಗಳು ವಿದೇಶಿ ಕಂಪನಿಗಳಿಂದ ತರಿಸುವ ತೊಗರಿಯಿಂದ ನಮ್ಮ ರಾಜ್ಯದಲ್ಲಿ ಬೆಳೆಯುವ ತೊಗರಿ ಬೆಳೆಗೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದು ಸಿಪಿಎಂ ಗ್ರಾಮೀಣ ಅಭ್ಯರ್ಥಿ ಮಾರುತಿ ಮಾನ್ಪಡೆ ಖೇದ ವ್ಯಕ್ತಪಡಿಸಿದರು.  ಕಲ್ಲಹಂಗರಗಾ ಗ್ರಾಮದಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಪಕ್ಷ ಹಣದ ರಾಜಕಾರಣ ಮಾಡುವುದಿಲ್ಲ. ನಮ್ಮ ಗುರಿ ಕೇವಲ ರೈತರ ಅಭಿವೃದ್ಧಿಗಾಗಿ ಎಂದರು.
ಖರ್ಗೆಗೆ ಮನವರಿಕೆ ಮಾಡಿದ್ದೆ: 30 ವರ್ಷಗಳಿಂದ ರೈತರ ಪರವಾಗಿ ಹಲವಾರು ಹೋರಾಟಗಳನ್ನು ಮಾಡಿ ಏಳು ಬಾರಿ ಜೈಲಿಗೆ ಹೋಗಿರುವೆ. ತೊಗರಿ ಬೆಲೆ ಕುರಿತು ಖರ್ಗೆಯವರಿಗೆ ಮನವರಿಕೆ ಮಾಡಿ ಕೊಟ್ಟಿದ್ದರೂ ಯಾವುದೇ ಉಪಯೋಗವಾಗಿಲ್ಲ. ಇದೀಗ ಸರ್ಕಾರಗಳು ವಿದೇಶಿ ಕಂಪನಿಗಳಿಗೆ ದೇಶ ಮಾರಾಟಕ್ಕಿಟ್ಟಿದ್ದಾರೆ. ಇನ್ನು ಮುಂದೆ ಉಳುವ ಭೂಮಿ ಸಹಿತ ವಿದೇಶಿ ಕಂಪನಿಗಳಿಗೆ ಕೊಡಲು ಹೊರಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರದಲ್ಲಿ ಎರಡು ಬಾರಿ ಮಂತ್ರಿಯಾಗಿ ರೇವು ನಾಯಕ ಬೆಳಮಗಿ ಈ ಕುರಿತು ಒಂದು ಪ್ರಶ್ನೆ ಸಹಿತ ಎತ್ತಲಿಲ್ಲ. ಇಂತಹ ವ್ಯಕ್ತಿ ನಮಗೆ ಬೇಕಿಲ್ಲ, ಈ ಬಾರಿ ಅವರಿಗೆ ತಕ್ಕಪಾಠ ಕಲಿಸಿ ಎಂದು ಕರೆ ನೀಡಿದರು. ಸಿಪಿಎಂ ರಾಜ್ಯ ಉಪಾಧ್ಯಕ್ಷರು ಮಾತನಾಡಿದರು.  ಶಿವಾಜಿರಾವ ಪಾಟೀಲ್, ಅಂಬಾರಾಯ ಹೊಸಮನಿ, ಚಿನಮಳ್ಳಿ, ಮಲ್ಲಿಕಾರ್ಜುನ ಪಾಟೀಲ್, ರೇವಪ್ಪ ಕುಲಕರ್ಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement