ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಳ್ಳಭಟ್ಟಿ ನಾಶ, ಬೆಲ್ಲದ ಕೊಳೆ ವಶ

Rashmi Kasaragodu
Updated On : 26 Apr 2013, 11:14 am

ಸುರಪುರ: ತಾಲೂಕಿನ ಏವೂರು ಗ್ರಾಮದ ಹಳ್ಳದ ದಂಡೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯ ಮೇಲೆ ಗುರುವಾರ ಮಧ್ಯಾಹ್ನ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ನಾಶಪಡಿಸಿದ್ದು, ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ. ಅಂದಾಜು 20 ಸಾವಿರ ಮೌಲ್ಯದ 411 ಲೀ. ಬೆಲ್ಲದ ಕೊಳೆ, 4 ಲೀ. ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡು, ಆರೋಪಿ ದೇವಪ್ಪ ಜೆಟ್ಟೆಪ್ಪನನ್ನು ಬಂಧಿಸಲಾಗಿದೆ. ಮಹಿಬೂಬ್ ಬುಡ್ಡೆಸಾಬ್ ಏವೂರು ಪರಾರಿಯಾಗಿದ್ದಾನೆ. ಗುಲ್ಬರ್ಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ ಆದೇಶದ ಮೇರೆಗೆ ಸುರಪುರ ವಲಯ ಅಬಕಾರಿ ನಿರೀಕ್ಷಕಿ ಭಾರತಿ ನೇತೃತ್ವದಲ್ಲಿ ಉಪ ನಿರೀಕ್ಷಕ ನೂರುಲ್ಲಾಖಾನ್, ಸಂಗನಗೌಡ, ಅಬಕಾರಿ ರಕ್ಷಕರಾದ ಅಂಬ್ರಪ್ಪ, ಗೋಪಾಲ, ಗೃಹ ರಕ್ಷಕ ದಳದ ಆದಪ್ಪ, ಬುಡ್ಡಪ್ಪ, ಕಾಂತಪ್ಪ, ರಂಗಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement