ಜೆಡಿಎಸ್ಗೆ ಮತ ನೀಡಿ ಆಶೀರ್ವದಿಸಿ
ಹುಣಸಗಿ: ನಿಮ್ಮ ಪ್ರತಿ ಮತವೂ ಅಮೂಲ್ಯವಾದದ್ದು. ಕ್ಷೇತ್ರದ ತಾಯಂದಿರು ಈವರೆಗೆ ನನ್ನನ್ನು ಬೆಂಬಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಸಮಸ್ಯೆ ನಿವಾರಣೆಗೆ ಈ ಬಾರಿ ಜೆಡಿಎಸ್ಗೆ ಮತ ನೀಡಿ ನನ್ನನ್ನು ಗೆಲ್ಲಿಸಿ ಎಂದು ರಾಜುಗೌಡ ಮನವಿ ಮಾಡಿದರು.
ಸಮೀಪದ ಸೊನ್ನಾಪುರದಲ್ಲಿ ರಾಜುಗೌಡ ಮತಯಾಚಿಸಿ, ಕ್ಷೇತ್ರದ ಜನತೆ ನನ್ನ ಮೇಲಿಟ್ಟ ವಿಶ್ವಾಸ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದ್ದರಿಂದ ಜನರಿಂದ ಪ್ರೀತಿ, ವಿಶ್ವಾಸ ವ್ಯಕ್ತವಾಗುತ್ತಿದೆ. ತಾಯಂದಿರು ನನ್ನನ್ನು ಮಗನಂತೆ ಕಂಡು ಹಾರೈಸುತ್ತಿದ್ದಾರೆ. ಇದು ನನ್ನ ಪುಣ್ಯ. ಈ ಬಾರಿಯೂ ನಿಮ್ಮ ರಾಜುಗೌಡನನ್ನು ಆರಿಸಿ ಕಳುಹಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿದರು.
ಶುಭ ಹಾರೈಕೆ: ಈ ವೇಳೆ ರೈತ ಮಹಿಳೆಯೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಮಾವಿನಹಣ್ಣು, ತಂಪಾದ ಮಜ್ಜಿಗೆಯನ್ನು ನೀಡಿ ಶುಭ ಹಾರೈಸಿದರು. ತಾಲೂಕಿನಲ್ಲಿ ಈ ಹಿಂದೆ ಪ್ರತಿ ಹಳ್ಳಿಯಲ್ಲಿ ಜಾತಿ, ಗದ್ದಲ, ಗುಂಪುಗಾರಿಕೆ ನಡೆಯುತ್ತಿತ್ತು. ನೀವು ಶಾಸಕರಾದ ನಂತರ ಶಾಂತಿ, ನೆಮ್ಮದಿ ಬೇರೂರಿದೆ ಎಂದು ಮಹಿಳೆ ಹೇಳಿದರು.
ಜಿಪಂ ಸದಸ್ಯ ಎಚ್.ಸಿ. ಪಾಟೀಲ್ ಮಾತನಾಡಿ, ಸಚಿವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿದರು. ಗದ್ದೆಪ್ಪ ಪೂಜಾರಿ, ಬಸಣ್ಣ ಭಂಗಿ, ನಿಂಗಾನಾಯಕ, ಭೀಮಾನಾಯಕ, ತಾರಾನಾಥ ಚವ್ಹಾಣ, ಬಾಬುಗೌಡ ವಠಾರ, ವೀರಸಂಗಪ್ಪ ಹಾವೇರಿ, ಜಟ್ಟೆಪ್ಪ ಪೂಜಾರಿ, ಬಸನಗೌಡ ಅಳ್ಳಿಕೋಟಿ, ರಾಯಪ್ಪ ಜೋಗಿನ್, ಬಾಸುನಾಯಕ, ಗುಂಡಪ್ಪ ನಾಯಕ, ಅಂಬ್ರೀಶ ದೇವರಮನಿ, ಗೋಪಾಲ ಚವ್ಹಾಣ ಇತರರು ಇದ್ದರು.