ಮತದಾನ ಜಾಗೃತಿಗೆ ವಿವಿಧ ಕಸರತ್ತು
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.25
ಚುನಾವಣಾ ಆಯೋಗದ ನಿರ್ದೇಶನದಂತೆ ರಚಿಸಲಾದ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಏ.26ರಿಂದ ಮೇ 3ರ ವರೆಗೆ ಬೀದಿ ನಾಟಕ, ಬೈಕ್ ರ್ಯಾಲಿ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಇಂದು ಬೈಕ್ ರ್ಯಾಲಿ: ಏ. 26ರಂದು ಬೆ. 8.30ಕ್ಕೆ ಯಾದಗಿರಿ ಪಟ್ಟಣದಲ್ಲಿ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಚಾಲನೆ ನೀಡಲಾಗುತ್ತಿದೆ. ರ್ಯಾಲಿಯು ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಅಂಬೇಡ್ಕರ್ ಭವನ, ಗಂಜ್ ಸರ್ಕಲ್, ಮೈಲಾಪುರ ಬೇಸ್ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಾಂಧಿಚೌಕದಲ್ಲಿ ಮುಕ್ತಾಯಗೊಳ್ಳಲಿದೆ.
ನಂತರ ಬೆ.10ಕ್ಕೆ ನಗರದ ಗಾಂಧಿಚೌಕದಲ್ಲಿ ನಗರಸಭೆ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಯುವತಿ ಸಂಘಗಳು ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ.
ನಾಳೆ ಬೀದಿ ನಾಟಕ: ಏ. 26ರಂದು ಬೆ.11ಕ್ಕೆ ಯಾದಗಿರಿ ನಗರದ ಗಾಂಧಿಚೌಕದಲ್ಲಿ ವಿವಿಧ ಕಲಾತಂಡಗಳಿಂದ ಬೀದಿನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಚಟುವಟಿಕೆಗಳು ನಡೆಯಲಿದ್ದು, ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿವೆ.
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ಬಳಿಚಕ್ರದಲ್ಲಿ ಏ. 26ರಂದು ಸಂಜೆ 4 ಗಂಟೆಗೆ ಬೀದಿನಾಟಕ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. 27ರಂದು ಬೆ. 9.30ಕ್ಕೆ ಯಲ್ಹೇರಿ ಗ್ರಾಮದಲ್ಲಿ, ಸಂಜೆ 4 ಗಂಟೆಗೆ ಕೊಂಕಲ್ ಗ್ರಾಮದಲ್ಲಿ, 28ರಂದು ಬೆ. 9.30ಕ್ಕೆ ಮಾದ್ವಾರ ಗ್ರಾಮದಲ್ಲಿ, ಸಂಜೆ 4.30 ಗಂಟೆಗೆ ಕಡೇಚೂರು ಗ್ರಾಮದಲ್ಲಿ ಬೀದಿ ನಾಟಕ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಗುರುಮಠಕಲ್ ಕ್ಷೇತ್ರದಲ್ಲಿ..: ಏ. 29ರಂದು ಗುರುಮಠಕಲ್ ಪಟ್ಟಣದಲ್ಲಿ ಬೆ. 9.30ಕ್ಕೆ ಬೈಕ್ ರ್ಯಾಲಿ, ಬೀದಿನಾಟಕ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಯಾದಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ಅರಕೇರ(ಕೆ)ದಲ್ಲಿ ಏ. 30ರಂದು ಬೆ. 9.30ಕ್ಕೆ ಹಾಗೂ ವರ್ಕನಳ್ಳಿ ಗ್ರಾಮದಲ್ಲಿ ಸಂಜೆ 4 ಗಂಟೆಗೆ ಬೀದಿನಾಟಕ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಮೇ 1ರಂದು ಬೆಳಗ್ಗೆ 9.30 ಗಂಟೆಗೆ ಬೆಂಡೆಬಂಬಳಿ ಗ್ರಾಮದಲ್ಲಿ, ಹಯ್ಯಾಳದಲ್ಲಿ ಸಂಜೆ 4 ಗಂಟೆಗೆ ರಂಗೋಲಿ ಮತ್ತು ಬೀದಿನಾಟಕ ಏರ್ಪಡಿಸಲಾಗಿದೆ. ನಾಯ್ಕಲ್ ಗ್ರಾಮದಲ್ಲಿ ಮೇ 2ರಂದು ಬೆ. 9.30ಕ್ಕೆ, ದೋರನಳ್ಳಿ ಗ್ರಾಮದಲ್ಲಿ ಬೀದಿನಾಟಕ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಇಂದು, ನಾಳೆ ಶಹಾಪುರ ಮತಕ್ಷೇತ್ರದಲ್ಲಿ..: ಶಹಾಪುರ ವಿಧಾನಸಭಾ ಕ್ಷೇತ್ರದ ರಸ್ತಾಪುರದಲ್ಲಿ ಏ. 26ರಂದು ಬೆ. 9.30 ಗಂಟೆಗೆ ಹಾಗೂ ಹತ್ತಿಗುಡೂರು ಗ್ರಾಮದಲ್ಲಿ ಸಂಜೆ 4 ಗಂಟೆಗೆ ಬೀದಿನಾಟಕ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಶಹಾಪುರ ಪಟ್ಟಣದಲ್ಲಿ ಏ. 27ರಂದು ಬೆ. 9.30 ಗಂಟೆಗೆ ಬೈಕ್ ರ್ಯಾಲಿ, ಬೀದಿನಾಟಕ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಕೆಂಭಾವಿ ಗ್ರಾಮದಲ್ಲಿ 28ರಂದು ಬೆ. 9.30ಕ್ಕೆ ಹಾಗೂ ಕರಡಕಲ್ ಗ್ರಾಮದಲ್ಲಿ ಸಂಜೆ 4ಕ್ಕೆ ಬೀದಿನಾಟಕ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಿದೆ. ಯಾಳಗಿ ಗ್ರಾಮದಲ್ಲಿ 29ರಂದು ಬೆ. 9.30ಕ್ಕೆ ಹಾಗೂ ಸಂಜೆ 4ಕ್ಕೆ ಅಮಲಿಹಾಳ ಗ್ರಾಮದಲ್ಲಿ ಬೀದಿ ನಾಟಕ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಸುರಪುರದಲ್ಲಿ 30ರಿಂದ..: ಸುರಪುರ ವಿಧಾನಸಭಾ ಕ್ಷೇತ್ರದ ಸುರಪುರ ಪಟ್ಟಣದಲ್ಲಿ ಏ.30ರಂದು ಬೆ. 9.30ಕ್ಕೆ ಬೈಕ್ ರ್ಯಾಲಿ, ಬೀದಿನಾಟಕ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕೃಷ್ಣಾಪುರ ಗ್ರಾಮದಲ್ಲಿ ಅಂದು ಸಂಜೆ 4ಕ್ಕೆ ಬೀದಿ ನಾಟಕ ಪ್ರದರ್ಶನ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಕಕ್ಕೇರಾ ಗ್ರಾಮದಲ್ಲಿ ಮೇ 1ರಂದು ಬೆ. 9.30 ಗಂಟೆಗೆ ಹಾಗೂ ರಾಜನಕೊಳ್ಳೂರ ಗ್ರಾಮದಲ್ಲಿ ಸಂಜೆ 4 ಗಂಟೆಗೆ ಬೀದಿನಾಟಕ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಿದೆ.
ವಜ್ಜಲ್ ಗ್ರಾಮದಲ್ಲಿ ಮೇ 2ರಂದು ಬೆ. 9.30ಕ್ಕೆ ಹಾಗೂ ಹುಣಸಗಿ ಗ್ರಾಮದಲ್ಲಿ ಸಂಜೆ 4ಕ್ಕೆ, ವಾಗಣಗೇರಾ ಗ್ರಾಮದಲ್ಲಿ ಮೇ 3ರಂದು ಬೆ. 9.30ಕ್ಕೆ ಬೀದಿನಾಟಕ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.