ಮಾಗನೂರ ಪರ ಪ್ರಚಾರ
ಯಾದಗಿರಿ: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಾಗನೂರ ಪರವಾಗಿ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಗುರುವಾರ ಮತಯಾಚಿಸಿದರು.
ನಗರದ ವಾರ್ಡ್ ಸಂಖ್ಯೆ 22, 23, 24ರಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿದ ಅವರು, ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸುತ್ತ ಅಭ್ಯರ್ಥಿಗೆ ತಮ್ಮ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ, ಜಿಪಂ ಸದಸ್ಯರಾದ ದೇವರಾಜ ನಾಯಕ, ಬಸವರಾಜ ಖಂಡ್ರೆ, ದೇವಿಂದ್ರನಾಥ ನಾದ, ಮಹೇಂದ್ರಗೌಡ, ಚನ್ನಕುಮಾರ್, ರವಿ ಮುದ್ನಾಳ, ನಿಂಗಣ್ಣ ಸಾಹುಕಾರ, ಗಂಗಯ್ಯ ಸ್ವಾಮಿ ಮೈಲಾಪುರ, ಭೀಮರಡ್ಡಿ ಕುರಕುಂದಿ ಸೇರಿದಂತೆ ಅನೇಕರು ಇದ್ದರು.