ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾರಾಯಿ; 6 ತಿಂಗಳು ಸಾದಾ ಶಿಕ್ಷೆ

Rashmi Kasaragodu
Updated On : 26 Apr 2013, 11:14 am

ಗುಲ್ಬರ್ಗ: ಜಿಲ್ಲೆಯ ಅಫಜಲ್ಪುರ ತಾಲೂಕಿನ ಶೇಷಗಿರಿ ವಾಡಿ ಗ್ರಾಮದ ಆರೋಪಿ ಶೇಷಗಿರಿ ಅನಧಿಕೃತವಾಗಿ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿರುವ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಗುಲ್ಬರ್ಗದ ಪ್ರಧಾನ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಹಮ್ಮದ್ ಖಾನ್ ಪಠಾಣ ಅವರು ಆರೋಪಿಗೆ 6 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮದಿಂದ ರಾಜ್ಯದ ಗಡಿ ಗ್ರಾಮಕ್ಕೆ ಕಳ್ಳಬಟ್ಟಿ ಸಾರಾಯಿ ಸಾಗಾಣಿಕೆ ಮಾಡಿಕೊಂಡು ಬಂದು ಶೇಷಗಿರಿ ವಾಡಿ ಗ್ರಾಮದ ಮಜೀದ್ ಕಟ್ಟೆಯ ಹತ್ತಿರ 3.12.2012 ರಂದು ಮಾರಾಟ ಮಾಡುತ್ತಿರುವಾಗ ಸಿಕ್ಕು ಬಿದ್ದಿದ್ದ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.


ಮೇ 3ರಂದು ತೆರೆ
ಗುಲ್ಬರ್ಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2013ರ ಮತದಾನವು ಮೇ 5ರಂದು ಬೆ.7ರಿಂದ ಸಂಜೆ 5ರ ವರೆಗೆ ನಡೆಯಲಿದೆ. ಮತದಾನ ಮುಕ್ತಾಯಗೊಳ್ಳುವ ಸಮಯದ 48 ಗಂಟೆಗಳ ಮುಂಚಿತವಾಗಿ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಳ್ಳಲಿದೆ. ಅಂದರೆ ಬಹಿರಂಗ ಪ್ರಚಾರ ಮೇ 3ರಂದು ಸಂಜೆ 5ಕ್ಕೆ ಮುಗಿಯಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement