ಹನುಮಾನ್ ರಥೋತ್ಸವ
ಯಾದಗಿರಿ: ತಾಲೂಕಿನ ವಿಶ್ವಾಸಪುರ(ಠಾಣಾಗುಂದಿ ಸ್ಟೇಷನ್) ತಾಂಡಾದ ಹನುಮಾನ್ ರಥೋತ್ಸವವು ಗುರುವಾರ ವೈಭವದಿಂದ ಜರುಗಿತು.
ರಥೋತ್ಸವಕ್ಕೆ ದೇವಸ್ಥಾನದ ಪೂಜಾರಿ ರಡ್ಡಿ ಮಹಾರಾಜ ಚಾಲನೆ ನೀಡಿದರು. ಗುರುವಾರ ಸಂಜೆ ಜರುಗಿದ ರಥೋತ್ಸವಕ್ಕೆ ಅಪಾರ ಭಕ್ತರು ಸಾಕ್ಷಿಯಾದರು. ರಥೋತ್ಸವದ ಮೇಲೆ ಭಕ್ತರು ಫಲ ಪುಷ್ಪಗಳನ್ನು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು. ಜಾತ್ರೆಯ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಠಾಣಗುಂದಿ, ಬೋಮಶೆಟ್ಟಳ್ಳಿ, ಹೆಡಗಿಮದ್ರಾ, ಬಸವಂತಪುರ, ತುಮಕೂರ, ಕ್ಯಾಸಪನಳ್ಳಿ ಹಾಗೂ ಮುದ್ನಾಳ ತಾಂಡಾಗಳಿಂದ ಸಾವಿರಾರು ಭಕ್ತರು ಆಗಮಿಸಿ ಹನುಮಾನ್ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.