ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖರ್ಗೆ, ಧರಂಗೆ ತಟ್ಟಿದ ತಪಾಸಣೆ ಬಿಸಿ

Rashmi Kasaragodu
Updated On : 27 Apr 2013, 10:58 am

ಗುಲ್ಬರ್ಗ/ಶಹಾಬಾದ್: ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಜಿ.ರಾಮಕೃಷ್ಣ ಪರ ಮತಯಾಚಿಸಲು ಶಹಾಬಾದ್ ನಗರಕ್ಕೆ ಶುಕ್ರವಾರ ಆಗಮಿಸಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಅವರಿಗೆ ಚಿತ್ತಾಪುರ ಕ್ರಾಸ್ ಬಳಿ ವಿಶೇಷ ತಪಾಸಣಾಧಿಕಾರಿಗಳು ತಡೆದು ಇಬ್ಬರು ಮುಖಂಡರ ವಾಹನವನ್ನು ತಪಾಸಣೆ ನಡೆಸಿದರು.
ಜೇವರ್ಗಿ ತಾಲೂಕಿನ ಮಂದೇವಾಲ್‌ದಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಅಲ್ಸಟಾಮ್ ಕಾರ್ಖಾನೆ ಹೆಲಿಪ್ಯಾಡ್‌ನಲ್ಲಿ ಇಳಿದು ಕಾರಿನಲ್ಲಿ ನಗರದಲ್ಲಿ ಪ್ರಚಾರಕ್ಕೆ ಆಗಮಿಸಿದ ಅವರಿಗೆ ವಾಹನ ತಡೆದ ತಪಾಸಣಾಧಿಕಾರಿ ಎಚ್.ಮುಷೀರ್ ಅಹ್ಮದ್, ಡಿವೈಎಸ್ಪಿ ಎಂ.ವಿ. ಸೂರ್ಯವಂಶಿ, ಎಎಸ್‌ಐ ಚಂದ್ರಕಾಂತ ಅವರು ಕೇಂದ್ರ ಮೀಸಲು ಪಡೆ ಹಾಗೂ ಪೊಲೀಸರ ಸಹಕಾರದಿಂದ ತಡೆದು ತಪಾಸಣೆ ನಡೆಸಿದರು.
ಅಧಿಕಾರಿಗಳು ತಪಾಸಣೆಗೆ ತಡೆದಾಗ ಇಬ್ಬರು ನಾಯಕರು ಮೌನವಾಗಿ ತಮ್ಮ ಸಮ್ಮತಿ ಸೂಚಿಸಿದರು. ತಪಾಸಣೆಯ ಎಲ್ಲ ಚಟುವಟಿಕೆಗಳನ್ನು ಶಶಿಕಾಂತ ಮಡಿವಾಳ ವಿಡಿಯೋ ಚಿತ್ರೀಕರಣ ನಡೆಸಿದರು. ನಂತರ ಅಧಿಕಾರಿಗಳ ಅನುಮತಿ ಪಡೆದು ಇಬ್ಬರು ನಾಯಕರು ಪ್ರಚಾರಕ್ಕೆ ಸಾಗಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement