ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ'

Rashmi Kasaragodu
Updated On : 27 Apr 2013, 10:57 am

ಆಳಂದ: ಕಾಂಗ್ರೆಸ್ ಬಿಕ್ಕಟ್ಟಿನ ಪಕ್ಷವಾಗಿದೆ. ಜೆಡಿಎಸ್ ತಂದೆ, ಮಕ್ಕಳ ಕುಟುಂಬ ರಾಜಕಾರಣ ಮಾಡುವ ಪಕ್ಷ. ಬಿಜೆಪಿ ಮಾತ್ರ ಒಗ್ಗಟ್ಟಿನಿಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಅವರು ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಶುಕ್ರವಾರ ಆಳಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಪವಾಡಶೆಟ್ಟಿ ಅವರ ಪರ ಕೈಗೊಂಡ ಚುನಾವಣಾ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಬಿಜೆಪಿಯಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದು, ಜಗದೀಶ ಶೆಟ್ಟರ್ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿಗಳಾಗಿದ್ದಾರೆ. ಈ ಭಾಗದ ಅಭಿವೃದ್ಧಿಗಾಗಿ ಅವರ ಶಕ್ತಿ ಹೆಚ್ಚಿಸಲು ಆಳಂದ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಬಸವರಾಜ ಪವಾಡಶೆಟ್ಟಿ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.
ಶಾಸಕ ಸುಭಾಷ ಗುತ್ತೇದಾರ ಮತ್ತು ಬಿ.ಆರ್. ಪಾಟೀಲರು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿರುವುದೇ ಕ್ಷೇತ್ರ ಹಿಂದುಳಿಯಲು ಕಾರಣವಾಗಿದೆ ಎಂದು ಟೀಕಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಘನಾಥ ಮಲಕಾಪುರೆ, ಪಕ್ಷದ ಉಸ್ತುವಾರಿ ಮಹಾಂತಗೌಡ ಪಾಟೀಲ್, ಮಲ್ಲಿನಾಥ ಪಾಟೀಲ್ ಚಿತಾಲೂರ, ಶ್ರೀಶೈಲ್ ಪಾಟೀಲ್, ಸುಭಾಷ ರಾಠೋಡ, ಡಿ.ಎ.ಚಿಲ್ಲಾಳ, ತಾನಾಜಿ ಟಿ. ಸೂರ್ಯವಂಶಿ, ಎಪಿಎಂಸಿ ಉಪಾಧ್ಯಕ್ಷ ತುಕಾರಾಮ ವಗ್ಗೆ, ರೇವಣಸಿದ್ಧ ಪಟ್ಮೆ, ತಾನಾಜಿ ಟಿ. ಸೂರ್ಯವಂಶಿ, ಮಲ್ಲಿಕಾರ್ಜುನ ವಣದೆ, ಕಾಶಿನಾಥ ಸುತಾರ, ಕಾಶಿನಾಥ ಅಣದುರ್ಗೆ, ಮೋತಿರಾಮ ಪವಾರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement