ನಾಳೆ ಅಂಚೆ ಮತಪತ್ರ ಚಲಾವಣೆ ವ್ಯವಸ್ಥೆ
ಗುಲ್ಬರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕರ್ತವ್ಯನಿರತರಾದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲೇ ಏ.28 ರಂದು ಬೆ.9ರಿಂದ ಸಂಜೆ 4ರವರೆಗೆ ಅಂಚೆ ಮತಪತ್ರ ಚಲಾಯಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ ಜಗದೀಶ ತಿಳಿಸಿದ್ದಾರೆ.
ವಿಧಾನಸಭಾ ಮತಕ್ಷೇತ್ರವಾರು ಅಂಚೆ ಮತಪತ್ರ ಮತ ಚಲಾಯಿಸುವ ಸ್ಥಳಗಳ ವಿವರ ಇಂತಿದ್ದು, ಅಂಚೆ ಮತಪತ್ರ ಹೊಂದಿದ ಚುನಾವಣಾ ಕರ್ತವ್ಯ ಸಿಬ್ಬಂದಿ ಈ ಸ್ಥಳಗಳಲ್ಲಿ ಬೆ.9ರಿಂದ ಸಂಜೆ 4ರವರೆಗೆ ಮತ ಚಲಾಯಿಸಬೇಕೆಂದು ತಿಳಿಸಿದ್ದಾರೆ.
ಅಫಜಲ್ಪುರ- ಸರ್ಕಾರಿ ಪದವಿ ಪೂರ್ವ ಕಾಲೇಜು. ಜೇವರ್ಗಿ- ತಹಸೀಲ್ದಾರ್ ಕಚೇರಿ. ಚಿತ್ತಾಪುರ- ಸರ್ಕಾರಿ ಪ್ರೌಢಶಾಲೆ. ಸೇಡಂ- ಮಾತೃಛಾಯಾ ಪಪೂ ಕಾಲೇಜು. ಚಿಂಚೋಳಿ- ಪುರುಷರ ಸರ್ಕಾರಿ ಪಪೂ ಕಾಲೇಜು ಚಂದಾಪುರ. ಗುಲ್ಬರ್ಗ(ಗ್ರಾಮೀಣ)- ಸರ್ಕಾರಿ ಎಂಪಿಎಚ್‌ಎಸ್ ತಹಸೀಲ್ದಾರ್ ಕಚೇರಿ ಸಮೀಪ. ಗುಲ್ಬರ್ಗ ದಕ್ಷಿಣ ಮತ್ತು ಗುಲ್ಬರ್ಗ ಉತ್ತರ- ಎನ್‌ವಿ ಪದವಿ ಕಾಲೇಜು. ಆಳಂದ- ಮಹಿಳೆಯರ ಸರ್ಕಾರಿ ಪಪೂ ಕಾಲೇಜು ಎಸ್‌ಬಿಎಚ್ ಸಮೀಪ ಆಳಂದ.