ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೈ-ಕ ಅಭಿವೃದ್ಧಿಗೆ 'ಕೈ' ಬೆಂಬಲಿಸಿ

Rashmi Kasaragodu
Updated On : 27 Apr 2013, 10:58 am

ಭ್ರಷ್ಟಾಚಾರ ಎಸಗುವುದರಲ್ಲೇ 5 ವರ್ಷ ಕಾಲಹರಣ ಮಾಡಿದ ಬಿಜೆಪಿ: ಖರ್ಗೆ


ಕನ್ನಡಪ್ರಭ ವಾರ್ತೆ   ಜೇವರ್ಗಿ   ಏ.26
ಹೈ-ಕ ಭಾಗದ ಬಹುದಿನದ ಬೇಡಿಕೆ 371ನೇ ಕಲಂ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು ಅದು ಅನುಷ್ಠಾನನಗೊಳ್ಳಬೇಕಾದರೆ ಈ ಭಾಗದ ಜನತೆ ಕಾಂಗ್ರೆಸ್ ಬೆಂಬಲಿಸುವಂತೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, 5 ವರ್ಷ ರಾಜ್ಯವನ್ನು ಆಳಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಎಸುಗುವದರಲ್ಲಿಯೇ ಕಾಲಹರಣ ಮಾಡಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುವುದು ನಿಶ್ಚಿತ.  ಅದು ಆಗಿದ್ದೇ ನಿಜವಾದರೆ ಈ ಭಾಗದ ಬಹುದಿನದ ಬೇಡಿಕೆ 371ನೇ ಕಲಂ ಅನುಷ್ಠಾನಕ್ಕೆ ಬರುವುದು ನಿಶ್ಚಿತ ಎಂದರು.
ನಿಮ್ಮ ಹಾಗೂ ಮಕ್ಕಳ, ಈ ಭಾಗದ ಅಭಿವೃದ್ಧಿಗಾಗಿ 371ಕಲಂ ತಿದ್ದುಪಡಿ ತರಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಸಿಎಂ ಧರಂ ಹಾಗೂ ನಾವು ಕಾರಣ. ದೇಶದ ಹಿತಕ್ಕಾಗಿ ತ್ಯಾಗ ಮಾಡುವ ಪಕ್ಷ ಕಾಂಗ್ರೆಸ್. ಈ ಪಕ್ಷಕ್ಕೆ ಮತ ನೀಡಿ ಆರಿಸಿ ತರಬೇಕೆಂದು ಮನವಿ ಮಾಡಿದರು.
ಕುರ್ಚಿಗಾಗಿ ಬಿಜೆಪಿ ತೊರೆದಿದ್ದಾರೆ: ಬಿಜೆಪಿಯಲ್ಲಿ ಕುರ್ಚಿಗಾಗಿ ಪಕ್ಷ ಬಿಟ್ಟು ಹೊರಬಂದವರಿದ್ದಾರೆ, ಆದರೆ ರಾಜ್ಯದ ಜನರ ಹಿತಬಯಸಿ ಬಂದವರು ಯಾರೂ ಇಲ್ಲ. ಬಿಜೆಪಿ ಹಾಗೂ ಕೆಜೆಪಿ ಒಬ್ಬರಿಗೊಬ್ಬರು ಚೂರಿ ಹಾಕುವ ಪಕ್ಷಗಳಾಗಿವೆ. ಕಾಂಗ್ರೆಸ್ ಮನುಷ್ಯನ ಜೀವನಕ್ಕೆ ಅವಶ್ಯಕವಾದ ಯೋಜನೆಗಳನ್ನು ನೀಡಿದೆ. ಸ್ವಾವಲಂಬಿಯಾಗಿ ಬದುಕುವ ರೈತರನ್ನು ಸೃಷ್ಟಿಸಿದ್ದೇವೆ ಎಂದರು.
ಕಳೆದ 36 ವರ್ಷಗಳಿಂದ ಶಾಸಕ, ಸಚಿವ, ಮುಖ್ಯಮಂತ್ರಿ ಹಾಗೂ ಸಂಸದರಾಗಿ ಧರ್ಮಸಿಂಗ್ ಅವರು ಈ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಾತ್ಯತೀತ ವ್ಯಕ್ತಿ ಧರಂಸಿಂಗ್ ಅವರು ಸುಮಾರು 6 ಕೋಟಿ ಜನರ ನಾಯಕನಾಗಲು ಈ ಕ್ಷೇತ್ರದ ಜನತೆಯ ಆಶೀರ್ವಾದವೇ ಕಾರಣ ಎಂದು ಹೇಳಿದರು.
ಜನತೆ ಋಣ ಮರೆಯಲು ಅಸಾಧ್ಯ: ಮಾಜಿ ಸಿಎಂ ಧರಂಸಿಂಗ್ ಮಾತನಾಡಿ, ನಾನು ಕಳೆದ 36 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಯಾವತ್ತೂ ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಲು ಕಾರಣರಾದ ಈ ಕ್ಷೇತ್ರದ ಜನತೆಯ ಋಣ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ನನ್ನ ಅವಧಿಯಲ್ಲಿ ಎಲ್ಲ ಜಾತಿ ಜನಾಂಗದವರಿಗೆ ಅವಕಾಶ ನೀಡಿದ್ದೇನೆ. ನನ್ನ ಅಲಕ್ಷತನಕ್ಕೆ ಕಳೆದ ಬಾರಿ 52 ಮತಗಳ ಅಂತರದಿಂದ ಸೋತಿದ್ದೇನೆ ಹೊರತು ಈ ಕ್ಷೇತ್ರದ ಜನತೆ ಯಾವತ್ತೂ ನನ್ನ ಕೈ ಬಿಟ್ಟಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಅಮೃತಗೌಡ ವಡಿಗೇರಾ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಸಿದ್ರಾಮಪ್ಪಗೌಡ ಹರನೂರ, ಗುರುಲಿಂಗಪ್ಪಗೌಡ ಆಂದೋಲಾ, ಶಿವಣ್ಣಗೌಡ ಬಾಸಗಿ, ಕಾಶಿರಾಯಗೌಡ ಯಲಗೋಡ, ಶಾಂತಗೌಡ ದುಮ್ಮದ್ರಿ, ಬಸವಣೆಪ್ಪ ಗೌನಳ್ಳಿ, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಶರಣಬಸಪ್ಪ ಜೋಗುರ್, ಶಿವಪುತ್ರಪ್ಪ ಕೋರಿ, ಮಲ್ಲಣ್ಣಗೌಡ ನೇದಲಗಿ, ಶಾಂತಗೌಡ ಪಾಟೀಲ್ ಮಳ್ಳಿ, ರೇವಣಸಿದ್ದಪ್ಪಗೌಡ ಕಮಾನಮನಿ, ಮಲ್ಲಿಕಾರ್ಜುನ ಸಾಹು ಆಲೂರ, ನೀಲಕಂಠ ಕಟ್ಟಿಸಂಗಾವಿ, ಸುಧೀಂದ್ರ ವಕೀಲ, ಸುಧೀಂದ್ರ ಆಲಬಾಳ, ಸಿದ್ದಣ್ಣ ಹಾಲಗಡ್ಲಾ, ಸೈಯದ್ ಫಯಾಜ್ ಜಮಾದಾರ, ಪಪಂ ಸದಸ್ಯ ಮಹಿಬೂಬ್ ಚನ್ನೂರ, ವಿಜಯಕುಮಾರ ಪಾಟೀಲ್, ಸಲಿಂ ಕಣ್ಣಿ, ಮಹಿಮೂದ್ ನೂರಿ, ಮರೇಪ್ಪ ಸರಡಗಿ ಸೇರಿದಂತೆ ಅನೇಕ ಕಾರ್ಯಕರ್ತರು, ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement