'ಪ್ರಗತಿಗಾಗಿ ಜೆಡಿಎಸ್ ಬೆಂಬಲಿಸಿ'
ಕ.ಪ್ರ. ವಾರ್ತೆ ಯಾದಗಿರಿ ಏ.27
ಬಡವರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಯನ್ನು ಅಭಿವೃದ್ಧಿ ಜೆಡಿಎಸ್‌ನಿಂದ ಮಾತ್ರ ನಿರೀಕ್ಷಿಸಬಹುದು. ಆದ್ದರಿಂದ ಜನತೆ ಈ ಬಾರಿ ಜೆಡಿಎಸ್ ಬೆಂಬಲಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಹೇಳಿದರು.
ಕ್ಷೇತ್ರದ ರಾಮಸಮುದ್ರ, ಮೈಲಾಪುರ, ಅರಕೇರಾ, ಹಳಿಗೇರಾ, ಹೊಸಳ್ಳಿ, ಪಗಲಾಪುರ, ಕುಯಿಲೂರ, ಎಂ.ಹೊಸಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಸಿ ಕಾಡ್ಲೂರ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಡವರ, ದೀನ ದಲಿತರ ಉದ್ಧಾರಕ್ಕೆ ಜೆಡಿಎಸ್ ಸದಾ ಸಿದ್ಧವಾಗಿದೆ. ಕಾರಣ ತಮ್ಮ ಅಮೂಲ್ಯ ಮತವನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಯೋಜನೆ ಜಾರಿಗೆ ಎಚ್ಡಿಕೆ ಸಿದ್ಧ: ಪಕ್ಷದ ಜಿಲ್ಲಾ ವಕ್ತಾರ ಬಸವರಾಜ ಚಂಡರಕಿ ಮಾತನಾಡಿ, ಪಕ್ಷದ ಪ್ರಣಾಳಿಕೆಯಲ್ಲಿರುವ ಕಡು ಬಡವರಿಗೆ ಸಹಾಯಕವಾಗುವ ಹಲವಾರು ಯೋಜನೆಗಳು ಕುಮಾರಸ್ವಾಮಿ ಕನಸಿನಂತೆ ಮುಖ್ಯಮಂತ್ರಿಯಾದ ನಂತರ ಜಾರಿ ತರಲು ಸನ್ನದ್ಧರಾಗಿದ್ದಾರೆ. ವಿಶೇಷವಾಗಿ ಅಂಗವಿಕಲರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು. ಕಾರಣ ಮತದಾರರು ಈ ಬಾರಿ ಜೆಡಿಎಸ್‌ಗೆ ಮತ ನೀಡಿ ಕಾಡ್ಲೂರ ಅವರನ್ನು ಗೆಲ್ಲಿಸಬೇಕೆಂದು ಕೋರಿದರು.
ಎಸ್.ಪಿ. ನಾಡೇಕರ ಮಾತನಾಡಿದರು. ಕುಯಿಲೂರ ಗ್ರಾಮದಲ್ಲಿ ಯುವ ಮುಖಂಡರು ಕಾಂಗ್ರೆಸ್ ಹಾಗೂ ಕೆಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು. ವೆಂಕರಡ್ಡಿ ಪಾಟೀಲ್, ನಾಗಪ್ಪ ಪೂಜಾರಿ, ಶರಣು, ರಾಘವೇಂದ್ರ ಗುತ್ತೆದಾರ, ವಿಜಯಕುಮಾರ, ನಾಗಪ್ಪ ಇತರರನ್ನು ಎ.ಸಿ. ಕಾಡ್ಲೂರ ಪಕ್ಷಕ್ಕೆ ಬರಮಾಡಿಕೊಂಡರು.