ಸಂಗಪ್ಪ ಅಲ್ಬಾ ಕಾಂಗ್ರೆಸ್ ರಾಜಿನಾಮೆ
ಚಿತ್ತಾಪುರ,: ತಾಲೂಕಿನ ಹೆಬ್ಬಾಳ ಗ್ರಾಮದ ಭೂತ್ ನಂ. 6 ಕಮಿಟಿಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಬಸವರಾಜ ಸಂಗಪ್ಪ ಅಲ್ಬಾ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಕಡೆಗಣನೆ ಮಾಡಿ ಬೇರೆ ಪಕ್ಷದಿಂದ ವಲಸೆ ಬಂದಿರುವ ನಾಯಕರಿಗೆ ಮಣೆ ಹಾಕುತ್ತಿರುವ ಧೋರಣಿ ವಿರೋಧಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಯಡಿಯೂರಪ್ಪ ನಾಯಕತ್ವ ಒಪ್ಪಿ ಹಿರಿಯ ಮುಖಂಡರಾದ ಬಸವರಾಜ ಶಿವಗೋಳ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷ ಗೋಪಾಲ್ ರಾಠೋಡ ಸಮ್ಮುಖದಲ್ಲಿ ಕೆಜೆಪಿಗೆ ತಮ್ಮ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡರು.