ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಜೆಪಿಗೆ ಭೂಶಕ್ತಿ ವೇದಿಕೆ ಬೆಂಬಲ

Lingaraj Badiger
Updated On : 29 Apr 2013, 11:03 am

ಆಳಂದ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ್ ಅವರಿಗೆ ಭೂಶಕ್ತಿ ವೇದಿಕೆ ಕರ್ನಾಟಕ ಘಟಕವು ಬೆಂಬಲ ವ್ಯಕ್ತಪಡಿಸಿದೆ.  ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆ ವಿಭಾಗೀಯ ಸಂಯೋಜಕ ವಿಠ್ಠಲ್ ಸಿ. ಕೋಣೆಕರ್ ಮತ್ತು ಸಂಗಮ ಪುಕ್ಕನ್ ಅವರು, ಪಾಟೀಲರು ಧೀಮಂತ ನಾಯಕ, ಜಾತ್ಯತೀತ ರಾಜಕಾರಣಿಯಾಗಿದ್ದಾರೆ. ಚುನಾವಣೆಯಲ್ಲಿ ವೇದಿಕೆ ಈ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆರಿಸಲು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ ಎಂದು  ವಿವರಿಸಿದ್ದಾರೆ.
ವಾಲ್ಮೀಕಿಗೆ ಜಯ ಖಚಿತ: ಡಾ. ಬಾಳಿ
ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ ನಂತರ ಸಿಕ್ಕ ಕೆಲವೇ ವರ್ಷಗಳ ಅವಕಾಶವನ್ನು ಬಳಸಿಕೊಂಡ ವಾಲ್ಮೀಕಿ ನಾಯಕ ತಾಲೂಕಿನ ಪ್ರತಿ ಗ್ರಾಮಗಳ ಅಭಿವೃದ್ಧಿ ಕೈಗೊಂಡಿದ್ದು, ಅವರ ಜಯ ಖಚಿತ ಎಂದು ಜಿಪಂ ಮಾಜಿ ಸದಸ್ಯ ಡಾ. ಗುಂಡಣ್ಣ ಬಾಳಿ ಹೇಳಿದರು. ವಾಡಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿಯವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಬಿಚ್ಚಿಟ್ಟು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಗುಲ್ಬರ್ಗ ವಾಡಿ, ಟೆಂಗಳಿ ಕ್ರಾಸ್, ಚಿತ್ತಾಪುರ, ಮಳಖೇಡ ಚಿತ್ತಾಪುರ, ಚಿತ್ತಾಪುರ ಬಲರಾಮ ಚೌಕ್ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಗ್ರಾಮಗಳಿಗೆ ಕೂಡು ರಸ್ತೆಗಳನ್ನು ನಿರ್ಮಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶರಣು ಜ್ಯೋತಿ ರಾವೂರ ಉಪಸ್ಥಿತರಿದ್ದರು.
ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿ: ತೇಲ್ಕೂರ
ಸೇಡಂ: ನಾನು ಈ ಚುನಾವಣೆಗೆ ಸ್ಪರ್ಧಿಸಿರುವುದು ಈ ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು. ಕ್ಷೇತ್ರದ ಕಲಕಂಭ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದೆ ಎಂದರು. ಈ ಸಂದರ್ಭದಲ್ಲಿ ಶರಣಪ್ಪ ತಳವಾರ, ನಿವೃತ್ತ ಡಿವೈಎಸ್‌ಪಿ ಸಿದ್ರಾಮಪ್ಪ ಸಣ್ಣೂರ, ನ್ಯಾಯವಾದಿ ಆರ್.ಎಸ್. ಪಾಟೀಲ್, ಯುವ ಘಟಕದ ಅಧ್ಯಕ್ಷ ವೆಂಕಟೇಶ ಪಾಟೀಲ್, ಹೆಮಂತ ಶಹಾ, ವಿಶ್ವನಾಥ ಬಿಲಗುಂದಿ, ಚನ್ನಬಸಪ್ಪ ನಿರ್ಣಿ, ಶ್ರಿಮಂತ ಅವಂಟಿ ಇದ್ದರು.
ರಾಜಗೋಪಾಲರೆಡ್ಡಿ ಬಿರುಸಿನ ಪ್ರಚಾರ
ಗುಲ್ಬರ್ಗ: ಗುಲ್ಬರ್ಗ ಉತ್ತರ ಮತಕ್ಷೇತ್ರದ ಬಿಜೆಪಿ ಹುರಿಯಾಳು ರಾಜಗೋಪಾಲರೆಡ್ಡಿ ನೆಹರು ಗಂಜ್, ಬ್ಯಾಂಕ್ ಕಾಲೋನಿ ಸೇರಿದಂತೆ ತಮ್ಮ ಕ್ಷೇತ್ರದ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ಪಾದಯಾತ್ರೆ ನಡೆಸಿದರು.  ಎಲ್ಲರೊಂದಿಗೆ ಮಾತನಾಡಿ  ರಾಜಗೋಪಾಲರೆಡ್ಡಿ ಮತಯಾಚನೆ ಮಾಡಿದರು.  
ಕೆಜೆಪಿಗೆ ಸೇರ್ಪಡೆ
ಸೇಡಂ: ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲ, ಅನಂತರೆಡ್ಡಿ, ಶರಣಭೂಪಾಲರೆಡ್ಡಿ, ಚಂದ್ರಶೇಖರರೆಡ್ಡಿ ಮದನಾ, ಎಸ್.ಎಸ್. ಪಾಕಾಲ, ಪರ್ವತರೆಡ್ಡಿ ಪಾಟೀಲ ನಾಮವಾರ ನೇತೃತ್ವದಲ್ಲಿ ಬೆನಕನಹಳ್ಳಿ ಗ್ರಾಮದ ರುದ್ರಣ್ಣ ಕಂಬಾರ, ಗ್ರಾಪಂ ಸದಸ್ಯರಾದ ದುರ್ಗಪ್ಪ ಅಣಿಕೇರಿ, ರವಿಕುಮಾರ ವಿಶ್ವಕರ್ಮ, ಸಲೀಂ ಫಕೀರ, ಶರಣಪ್ಪ ಬಾಲಾ ಕೆಜೆಪಿ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement