ಗೆಲವಿಗಾಗಿ ದೀಡ್ ನಮಸ್ಕಾರ
ಜೇವರ್ಗಿ: ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಗೆಲವಿಗೆ ಪ್ರಾರ್ಥಿಸಿ ಬಿಜಾಪುರ ರಸ್ತೆಯಲ್ಲಿರುವ ಆಶ್ರಯ ಬಡಾವಣೆಯ ಪಕ್ಷದ ಕಾರ್ಯಕರ್ತರು ಹನುಮಾನ ದೇವಸ್ಥಾನದಿಂದ 4 ಕಿ.ಮೀ ದೂರದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿದರು.
ಶಾಸಕ ನರಿಬೋಳ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಕಳೆದ 40 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 5 ವರ್ಷಗಳಲ್ಲಿ ಮಾಡಿದ್ದಾರೆ.
ಅವರ ಗೆಲವಿಗಾಗಿ ನಾವುಗಳು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದು ಕಾರ್ಯಕರ್ತರಾದ ಬಸಲಿಂಗಯ್ಯ ಹಿರೇಮಠ, ಅನೀಲ್ ಪವಾರ, ಮರೇಪ್ಪ ಪೂಜಾರಿ, ಶಿವುಕುಮಾರ ಪೂಜಾರಿ, ವಿಠ್ಠಲ್ ಬಡಿಗೇರ, ಲಕ್ಷ್ಮಣ ವಡ್ಡರ್, ರವಿ ಯಾಳಗಿ ತಿಳಿಸಿದರು.
ಶಾಸಕ ನರಿಬೋಳ ಅವರ ಸಹೋದರ ಜಯಪ್ರಕಾಶ ಪಾಟೀಲ್, ಶ್ರೀನಿವಾಸ ವಕೀಲ, ಸಿದ್ದಣ್ಣಗೌಡ ಹಳ್ಳಿ, ಕುಪೇಂದ್ರ ಕಲ್ಲಾ, ಕರಣು ಹಳ್ಳಿ, ಅಶೋಕ ಅವರಾದ, ಮಲ್ಲಿಕಾರ್ಜುನ ಕಲ್ಲಾ, ವಿಶ್ವನಾಥ ಇಮ್ಮಣ್ಣಿ, ಮನೋಜ ಕುಲಕರ್ಣಿ, ದೇವೀಂದ್ರ ಜೈನ್, ಷಣ್ಮುಖಯ್ಯ ಘಂಟಿಮಠ, ಮಲ್ಕಣ್ಣ ಅವರಾದಿ, ವೀರೇಶ ಪಾಟೀಲ್, ಶರಣು ಕೋಳಕೂರ ಈ ಸಂದರ್ಭದಲ್ಲಿದ್ದರು.