ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಪಕ್ಷಾಂತರಿಗಳಿಗೆ ಮತದಾರರಿಂದ ತಕ್ಕ ಪಾಠ'

Lingaraj Badiger
Updated On : 29 Apr 2013, 11:03 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.28
ಕಾಂಗ್ರೆಸ್ ಪಕ್ಷದ 371(ಜೆ)ನೇ ಸಾಧನೆ ಮತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಆದರ್ಶ ಮುಖ್ಯಮಂತ್ರಿ ಎನಿಸಿಕೊಂಡ ತಮ್ಮ ತಂದೆ ದಿ. ವೀರೇಂದ್ರ ಪಾಟೀಲ್ ಅವರ ಹೆಸರು ತಮ್ಮ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದು ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೈಲಾಸನಾಥ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರೇಂದ್ರ ಪಾಟೀಲ್ ಅವರ ಹೆಸರು ತಾವು ದುರ್ಬಳಕೆ ಮಾಡಿ ಯಾರಿಗೂ ಮೋಸ ಮಾಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಚುನಾನಣಾ ಅಖಾಡಕ್ಕೆ ಇಳಿದಿರುವೆ. ಒಳ್ಳೆಯ ಕೆಲಸಕ್ಕಾಗಿ ಅವರ ಹೆಸರು ಬಳಸಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಗೆಲವಿನ ವಿಶ್ವಾಸ: ವೀರೇಂದ್ರ ಪಾಟೀಲ್ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವ ನೋಡಿಯೇ ಜನತೆ ತಮಗೆ ಆಶೀರ್ವದಿಸಿ ಒಮ್ಮೆ ವಿಧಾನ ಪರಿಷತ್ತಿಗೆ ಆರಿಸಿ ಕಳುಹಿಸಿದ್ದಾರೆ. ಆಗ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನತೆ ಇನ್ನೂ ಮರೆತಿಲ್ಲ. ತಂದೆಯಂತೆ ಅಭಿವೃದ್ಧಿಪರ ಚಿಂತಕನಾಗಿರುವ ತಾವು ಈ ಚುನಾವಣೆಯಲ್ಲಿ ಖಂಡಿತ ಗೆಲವು ಸಾಧಿಸುವೆ ಎಂದರು.
ಕಾಂತಾ ಆದರ್ಶ ಏನಾಯಿತು?: ಭ್ರಷ್ಚಾಚಾರದ ವಿರೋಧಿ ಧೋರಣೆ ಹೊಂದಿರುವುದಾಗಿ ಹೇಳಿಕೊಳ್ಳುತ್ತಿದ್ದ ಎಸ್.ಕೆ. ಕಾಂತಾ ಅವರು ಇದೀಗ ಭ್ರಷ್ಟಾಚಾರದಲ್ಲಿ ಮುಳಿಗಿರುವ ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಆದರ್ಶ, ವ್ಯಕ್ತಿತ್ವ ಮತ್ತು ಜೆಡಿಎಸ್ ಪರ ಹೊಂದಿರುವ ನಿಲುವು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. 22 ವರ್ಷಗಳ ಕಾಲ ಪಕ್ಷದ ಸಿದ್ಧಾಂತಗಳೊಂದಿಗೆ ದುಡಿದ ನಮೋಶಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ತ್ಯಜಿಸಿ ಅಧಿಕಾರಕ್ಕಾಗಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.  ಪಕ್ಷಾಂತರ ಮಾಡುವ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮಾಸ್ಟರ್‌ರತ್ತ ಒಲವು
ಆಳಂದ,: ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದಣ್ಣ ಮಾಸ್ಟರ್ ಶೇಗಜಿ ಅವರಿಗೆ ಮತದಾರರು ಒಲವು ತೋರಿಸಿದ್ದು, ಅವರ ಗೆಲವು ನಿಶ್ಚಿತ ಎಂದು ದಿನಗೂಲಿ ನೌಕರ ಸಂಘದ ಗೌರವ ಅಧ್ಯಕ್ಷ ಈಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಚಂದ್ರಶೇಖರ ಹಿರೇಮಠ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭ್ಯರ್ಥಿಯೊಂದಿಗೆ ಹಳ್ಳಿಗಳಿಗೆ ಹೋಗಿ ಪ್ರಚಾರ ನಡೆಸಿದ್ದೇವೆ. ಕಾಂಗ್ರೆಸ್ ಪರ ಜನರ ಒಲವು ಮೂಡಿದೆ.   ಎರಡು ದಶಕಗಳಿಂದ ಬರೀ ಆರೋಪ ಪ್ರತ್ಯಾರೋಪಗಳಿಂದ ಮತದಾರರು ಬೇಸತ್ತು ಹೋಗಿದ್ದಾರೆ. ಗುತ್ತೇದಾರ, ಬಿ.ಆರ್. ಪಾಟೀಲರು ಆರೋಪ, ಪ್ರತ್ಯಾರೋಪಗಳಿಂದ ಕಾಲಹರಣ ಮಾಡಿರುತ್ತಾರೆ. ಇವರ ವೈಯಕ್ತಿಕ ಪ್ರತಿಷ್ಠೆಯಿಂದ ಜನ ಕುಗ್ಗಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement