ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಿಯಾಂಕ್ ಖರ್ಗೆಗೆ ಕಾರ್ಯಕರ್ತರ ಕೊರತೆ: ವಾಲ್ಮೀಕಿ ನಾಯಕ

Lingaraj Badiger
Updated On : 29 Apr 2013, 11:05 am

ಗುಲ್ಬರ್ಗ/ಶಹಾಬಾದ್: ರಾಜ್ಯದಲ್ಲಿ 5 ವರ್ಷ ಅಧಿಕಾರಿ ನಡೆಸಿರುವ ಸರ್ಕಾರದ ಸಾಧನೆ, ಗ್ರಾಮಗಳ ಅಭಿವೃದ್ಧಿ ಕಂಡ ಯುವಕರು, ಗ್ರಾಮಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಕಾರ್ಯಕರ್ತರ ಕೊರತೆ ಎದುರಾಗಿದೆ ಎಂದು ಶಾಸಕ ವಾಲ್ಮೀಕಿ ನಾಯಕ ಹೇಳಿದರು. ಹಲಕರ್ಟಿ ಗ್ರಾಮದಲ್ಲಿ ಇತ್ತೀಚೆಗೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಘಟಾನುಘಟಿಗಳು ಈ ಕ್ಷೇತ್ರದಿಂದ ಆರಿಸಿದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ತಮ್ಮ ಮನೆಗಳ ಅಭಿವೃದ್ಧಿ ಮಾಡಿಕೊಂಡಿದ್ದಾರೆಂದು ವ್ಯಂಗವಾಡಿದರು. ತಾವು ಚುನಾವಣೆಯಲ್ಲಿ ಗೆದ್ದ ನಂತರ ಕೇವಲ ಮೂರು ವರ್ಷದಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದನ್ನು ಗಮನಿಸಿ ಗ್ರಾಮಗಳ ಯುವಕರು, ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಈ ವೇಳೆ ಯಾಗಾಪುರ, ಬೇಳಗೇರಾ, ಹಲಕರ್ಟಿ ಗ್ರಾಮಗಳು ಕಾಂಗ್ರೆಸ್‌ನ 100ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಈರಣ್ಣ ರಾವೂರಕರ್, ಮಾಣಿಕಪ್ರಭು ಕುಲ್ಕರ್ಣಿ, ತಾಪಂ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಮಲ್ಲಪ್ಪ ಚೌಧರಿ, ಡಾಕೂಸಿಂಗ್ ರಾಠೋಡ, ಶಮಿಶೀರ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವಾಲ್ಮೀಕಿಗೆ ಜಯ ಖಚಿತ: ಡಾ. ಬಾಳಿ
ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ ನಂತರ ಸಿಕ್ಕ ಕೆಲವೇ ವರ್ಷಗಳ ಅವಕಾಶವನ್ನು ಬಳಸಿಕೊಂಡ ವಾಲ್ಮೀಕಿ ನಾಯಕ ತಾಲೂಕಿನ ಪ್ರತಿ ಗ್ರಾಮಗಳ ಅಭಿವೃದ್ಧಿ ಕೈಗೊಂಡಿದ್ದು, ಅವರ ಜಯ ಖಚಿತ ಎಂದು ಜಿಪಂ ಮಾಜಿ ಸದಸ್ಯ ಡಾ. ಗುಂಡಣ್ಣ ಬಾಳಿ ಹೇಳಿದರು. ವಾಡಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿಯವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಬಿಚ್ಚಿಟ್ಟು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಗುಲ್ಬರ್ಗ ವಾಡಿ, ಟೆಂಗಳಿ ಕ್ರಾಸ್, ಚಿತ್ತಾಪುರ, ಮಳಖೇಡ ಚಿತ್ತಾಪುರ, ಚಿತ್ತಾಪುರ ಬಲರಾಮ ಚೌಕ್ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಗ್ರಾಮಗಳಿಗೆ ಕೂಡು ರಸ್ತೆಗಳನ್ನು ನಿರ್ಮಿಸಿದ್ದಾರೆ ಎಂದರು. ಸಮಾಜದ ಎಲ್ಲ ಸಮುದಾಯಕ್ಕೆ ಕನಕ ಭವನ, ಅಂಬಿಗರ ಚೌಡಯ್ಯ ಭವನ, ಜಗಜೀವನರಾಂ ಭವನ, ಬಂಜಾರ ನಿಗಮದಿಂದ ಸೇವಾಲಾಲ ಭವನ ಸೇರಿದಂತೆ ಎಲ್ಲ ಸಮುದಾಯಕ್ಕೆ ಸಮುದಾಯ ಭವನ ನಿರ್ಮಿಸಿದ್ದಾರೆ. ನಾಲವಾರ ವಲಯದ ಸುಕ್ಷೇತ್ರ ಕೋರಿಸಿದ್ದೇಶ್ವರ ಮಠ, ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನದಲ್ಲಿ ಯಾತ್ರಿ ನಿವಾಸ, ಚಂದ್ರಲಾಂಬಾ ದೇವಸ್ಥಾನದ ಬಳಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement