ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಜೆಪಿ ಗೆಲವು ಖಚಿತ: ಮುದ್ನಾಳ

Vishwanath S
Updated On : 1 May 2013, 12:14 pm

ಕ.ಪ್ರ.ವಾರ್ತೆ  ,   ಗುರುಮಠಕಲ್  ,   ಏ.30
ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೆಜೆಪಿ ಪ್ರಚಂಡ ಬಹುಮತದಿಂದ ಗೆಲವು ಸಾಧಿಸಲಿದೆ. ಅಲ್ಲದೆ ರಾಜ್ಯದಲ್ಲೂ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಿಎಂ ಯಾಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗವಾಗುವಂತಹ ಕೊಡುಗೆಗಳನ್ನು ನಿಡುವುದರ ಜತೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಯಾರಿಂದಲೂ ಆಗಂದಂತಹ ಕಾರ್ಯವನ್ನು ಯಾಡಿಯೂರಪ್ಪನವರು ಮಾಡಿ ತೋರಿಸಿದ್ದಾರೆ. ಅವರು ನೀಡಿದ ಕೊಡುಗೆಗಳೇ ತಮ್ಮ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದರು.
ಉದ್ದೇಶಪೂರ್ವಕವಾಗಿ ಅಪಪ್ರಚಾರ: ಗುರುಮಠಕಲ್ ಮತಕ್ಷೇತ್ರದಲ್ಲಿ ಕೂಡ ಪಕ್ಷಕ್ಕೆ ಒಳ್ಳೆಯ ಕಾಲ ಕೂಡಿ ಬಂದಿದೆ. ಗ್ರಾಮೀಣ ಭಾಗದಲ್ಲಿ ಜನತೆ ಮನೆಮನೆಗೆ ಕರೆದು ನೀವು ಗೆಲ್ಲುತ್ತೀರಿ ಎಂದು ಹೇಳುವ ಮೂಲಕ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಮನೆ ಮಗನಂತೆ ಕಂಡು ಮತ ಹಾಕಿ ಗೆಲ್ಲಿಸುವ ತವಕದಲ್ಲಿ ಮತದಾರರಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಕೆಜೆಪಿಗೆ ಗೆಲವು ಖಚಿತ: ಕಾಂಗ್ರೆಸ್ ಶಾಸಕ ಬಾಬೂರಾವ ಚಿಂಚನಸೂರ ಅವರಿಂದ ಗುರುಮಠಕಲ್ ಕ್ಷೇತ್ರ ಲೂಟಿಯಾಗಿ ಸಂಪೂರ್ಣವಾಗಿ ಅಭಿವೃದ್ಧಿಯಿಂದ ದೂರ ಉಳಿದಿದೆ. ಜನರಿಗೆ ಸಿಗಬೇಕಾದ ಸೌಲಭ್ಯವಿಲ್ಲದೆ ಜನತೆ ರೊಚ್ಚಿಗೆದ್ದಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ. ಕೆಜೆಪಿ ಗೆಲ್ಲುವುದು ನಿಶ್ಚಿತ ಎಂದರು. ವೆಂಕಟರಾಮರಡ್ಡಿ ವಡವಟ್, ಶರಣಗೌಡ ಬಾಡಿಯಾಳ, ಭೀಮಣ್ಣಗೌಡ ಕ್ಯಾತನಾಳ, ಮೋಹನಬಾಬು, ರಾಜೇಂದ್ರ ಕಲಾಲ್, ಪರಶುರಾಮ, ಚಂದುಲಾಲ ಚೌದ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement