ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಜೆಪಿಗೆ ಕ್ಯಾತನಾಳ, ಮುದ್ನಾಳಗೆ ಬಲ

Vishwanath S
Updated On : 1 May 2013, 12:14 pm

ಯಾದಗಿರಿ: ರಾಜ್ಯವನ್ನು ಕಲ್ಯಾಣ ನಾಡನ್ನಾಗಿ ಮಾಡುವ ಕನಸನ್ನು ಯಡಿಯೂರಪ್ಪ ಹೊಂದಿದ್ದರೆ ಆ ಪಕ್ಷದಿಂದ ಸ್ಪರ್ಧಿಸುತ್ತಿರುವ ನಾನು ಗುರಮಠಕಲ್ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಹೆಬ್ಬಯಕೆ ಹೊಂದಿದ್ದೇನೆ. ಆದ್ದರಿಂದ ನಿಮ್ಮ ಮುಂದೆ ಮತ ಯಾಚಿಸುತ್ತಿದ್ದು, ಮತದಾರರು ಆಶೀರ್ವದಿಸಬೇಕು ಎಂದು ಕೆಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮನವಿ ಮಾಡಿದರು. ಮತಕ್ಷೇತ್ರದ ದುಪ್ಪಲ್ಲಿ ಗ್ರಾಮದಲ್ಲಿ ಭಾನುವಾರ ಕೆಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಅವರು ಬಿಜೆಪಿ ತೊರೆದು ಕೆಜೆಪಿ ಸೇರಿದರು. ಕಳೆದ 5 ವರ್ಷಗಳ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಯಾದಗಿರಿಗೆ ಬಂದಾಗ ಕೊಟ್ಟ ಮಾತಿನಿಂತೆ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಅದರಂತೆ ಈ ಬಾರಿಯೂ ಗುರಮಠಕಲ್ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ವಾಗ್ದಾನ ಮಾಡಿದ್ದಾರೆ. ಕ್ಯಾತನಾಳ ಮಾತನಾಡಿ, ನಾನು ಎಂದಿಗೂ ಮುದ್ನಾಳ ಮನೆತನದ ಸದಸ್ಯ. ಕೆಲವೊಂದು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಇಷ್ಟು ದಿನ ಚುನಾವಣಾ ಪ್ರಚಾರದಿಂದ ದೂರ ಉಳಿದಿದೆ.  ಅಮೀನರಡ್ಡಿ, ಭೀಮರಾಯ ಬದ್ದೇಪಲ್ಲಿ, ಪ್ರಕಾಶ ಸೈದಾಪುರ, ಮಲ್ಲನಗೌಡ ದುಪ್ಪಲ್ಲಿ, ಮಲ್ಲನಗೌಡ ಹತ್ತಿಕುಣಿ, ತಾಯಪ್ಪ ಬದ್ದೆಪಲ್ಲಿ, ಸೂಗಪ್ಪ ಕಡೇಚೂರ, ಶ್ರೀಧರ ಘಂಟಿ, ನಾಗರಡ್ಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement