ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀತಿ ಸಂಹಿತೆ ಉಲ್ಲಂಘನೆ 60 ಪ್ರಕರಣ ದಾಖಲು

Vishwanath S
Updated On : 1 May 2013, 12:12 pm

ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯ ಪ್ರಯುಕ್ತ ಏ.5 ರಿಂದ 29ರವರೆಗೆ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆಯ ಒಟ್ಟು 60 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಏ.29 ರಂದು ನೀತಿ ಸಂಹಿತೆ ಉಲ್ಲಂಘನೆಯ 4 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.
ಉಲ್ಲಂಘನೆ ಪ್ರಕರಣಗಳ ವಿವರ : ಅಫಜಲ್ಪುರ-3, ಜೇವರ್ಗಿ-10, ಚಿತ್ತಾಪುರ(ಎಸ್‌ಸಿ)-2, ಸೇಡಂ-10, ಚಿಂಚೋಳಿ (ಎಸ್‌ಸಿ)-7, ಗುಲ್ಬರ್ಗ ಗ್ರಾಮೀಣ (ಎಸ್‌ಸಿಇ)-07, ಗುಲ್ಬರ್ಗ ದಕ್ಷಿಣ-13, ಗುಲ್ಬರ್ಗ ಉತ್ತರ-6, ಆಳಂದ-2. ಏ.29 ರಂದು ನೀತಿ ಸಂಹಿತೆ ಉಲ್ಲಂಘನೆಯ 4 ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವರ ಇಂತಿದೆ.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭಾಗ್ಯವಂತಿ ನಗರ ವಾರ್ಡ್ ಸಂ. 50ರ ಸಾರ್ವಜನಿಕ ಸ್ಥಳಗಳಲ್ಲಿ ಜೆಡಿಎಸ್ ಭಿತ್ತಿಪತ್ರಗಳನ್ನು ಅಂಟಿಸಿದ್ದಕ್ಕಾಗಿ ಪಕ್ಷದ ವಿರುದ್ಧ ಗುಲ್ಬರ್ಗ ನಗರದ ಅಶೋಕ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲ್ಯಾಣನಗರ, ಕುವೆಂಪು ನಗರ, ಬ್ಯಾಂಕ್ ಕಾಲೋನಿ ಹಾಗೂ ಮಹರ್ಷಿ ವಾಲ್ಮಿಕಿ ಶಾಲೆಯ ಗೋಡೆಯ ಮೇಲೆ ಬಿಜೆಪಿ ನಾಯಕರ ಭಿತ್ತಿಪತ್ರಗಳನ್ನು ಅಂಟಿಸಿದ್ದಕ್ಕಾಗಿ ಗುಲ್ಬರ್ಗದ ಜೆಎಂಎಫ್‌ಸಿ ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಧೀಶ (ಜೆ.ಡಿ)ರಲ್ಲಿ ಎಫ್‌ಐಆರ್ ಸಲ್ಲಿಸಲಾಗಿದೆ. ಸೇಡಂ ವ್ಯಾಪ್ತಿಯ ಸೇಡಂ ಬಸ್ ನಿಲ್ದಾಣದಿಂದ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಚುನಾವಣಾ ಆಯೋಗದ ಅನುಮತಿಯಿಲ್ಲದೆ ಮೆರವಣಿಗೆ ನಡೆಸಿದ ಕಾರಣ ಕಾಂಗ್ರೆಸ್  ವಿರುದ್ಧ ಸೇಡಂ ಠಾಣೆಯಲ್ಲಿ ಎಫ್‌ಐಆರ್ ಪ್ರಕರಣ ದಾಖಲಿಸಲಾಗಿದೆ. ಆಳಂದ ಮತಕ್ಷೇತ್ರದ ವ್ಯಾಪ್ತಿಯ ಆಳಂದ ದಲ್ಲಿ ಅನುಮತಿಯಿಲ್ಲದೆ ಕೆಜೆಪಿ 3 ಮೋಟರ್ ಸೈಕಲ್‌ಗಳ ಮೇಲೆ ಬ್ಯಾನರ್ ಹಾಕಿ ಪ್ರಚಾರ ಮಾಡಿದ್ದಕ್ಕಾಗಿ ಎಫ್‌ಐಆರ್ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement